ಕುಮಟ: ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಅರಣ್ಯವಾಸಿಗಳು ಸಾಗುವಳಿ ಹಕ್ಕಿಗೆ ಸಂಬಂಧಿಸಿ ಕಾನೂನಿನ ಸಂಕೋಲೆಯಲ್ಲಿ ಸಿಲುಕಿವುದರಿಂದ ಅರಣ್ಯವಾಸಿಗಳು ಕಾನೂನು ಹೋರಾಟಕ್ಕೆ ಸಜ್ಜಾಗಿ. ಈ ಹಿನ್ನೆಲೆಯಲ್ಲಿ ಗ್ರೀನಕಾರ್ಡ್ ಪ್ರಮುಖರು ಕಾನೂನು ಜ್ಞಾನ ಹೆಚ್ಚಿಸಿಕೊಳ್ಳಿ ಅರಣ್ಯವಾಸಿಗಳಿಗೆ ನೇರವಾಗಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಜ.6ರಂದು ಕುಮಟಾ ಮಾಸ್ತಿಕಟ್ಟಾ ಸಂಭಾಗಣದಲ್ಲಿ ಜರುಗಿದ ಕುಮಟಾ ತಾಲೂಕಿನ ಗ್ರೀನ್ ಕಾರ್ಡ ಪ್ರಮುಖರಿಗೆ ತರಬೇತಿ ಶಿಬಿರದಲ್ಲಿ ಮಾತ್ತನಾಡುತ್ತಾ ಹೇಳಿದರು.
ಕಾನೂನು ಜ್ಞಾನದಿಂದ ವಂಚಿತರಾಗಿ ಅರಣ್ಯವಾಸಿಗಳಿಗೆ ಸಮಸ್ಯೆ ಉಂಟಾಗಬಾರದೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಒಂದು ಸಾವಿರ ಕಾರ್ಯಕರ್ತರನ್ನು ಗುರುತಿಸಿ ಕಾನೂನು ಜ್ಞಾನ ನೀಡುವದೊಂದಿಗೆ ಗ್ರೀನ್ ಕಾರ್ಡ ಪ್ರಮುಖರಿಗೆ ವಿತರಿಸುವ ಯೋಜನೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ ಕತಗಾಲ, ಯಾಕುಬ ಸಾಬ, ಸೀತರಾಮ ನಾಯ್ಕ, ಜಗದೀಶ ಹರಿಕ್ರಂತ, ಶಂಕರ ಗೌಡ, ಹರಿಶ್ಚಂದ್ರ ಮರಾಠಿ, ಸುನೀತಾ ಹರಿಕಾಂತ, ಜಗದೀಶ ನಾಯ್ಕ ಕತಗಾಲ ಉಪಸ್ಥಿತರಿದ್ದರು.
ವಿವಿಧ ರೀತಿಯ ಕಾನೂನು ಸಮಸ್ಯೆಗಳು:
ಅರಣ್ಯ ಭೂಮಿ ಸಾಗುವಳಿದಾರರು ಭೂಮಿ ಹಕ್ಕನ್ನು ಪಡೆಡುಕೊಳ್ಳುವ ನಿರೀಕ್ಷೆಯಲ್ಲಿರುವ ಹಿನ್ನಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದಿಂದ ಒಕ್ಕಲೇಬ್ಬಿಸುವ ಪ್ರಕರಣ, ಅರಣ್ಯ ಹಕ್ಕು ಸಮಿತಿಯಿಂದ ೧೯೩೦ ರ ದಾಖಲೆಗೆ ಸುತ್ತು ಆದೇಶ, ಭೂಕಬಳಿಕೆ ನಿಷೇಧ ಕಾಯಿದೆಯಿಂದ ಜೈಲು ಶಿಕ್ಷೆ, ಅರಣ್ಯ ಇಲಾಖೆಯಿಂದ ಒಕ್ಕಲೇಬ್ಬಿಸುವ ಪ್ರಕ್ರಿಯೆ, ಅರಣ್ಯ ಸಿಬ್ಬಂಧಿಗಳಿAದ ದೌರ್ಜನ್ಯ, ಕಿರುಕುಳ ಪ್ರಕರಣಗಳು-ಹೀಗೆ ಅರಣ್ಯವಾಸಿಗಳಿಗೆ ಕಾನೂನಿನ ತೊಡಕಿನಲ್ಲಿ ಸಿಲುಕಿರುವದರಿಂದ ಗ್ರೀನ್ ಕಾರ್ಡ ಪ್ರಮುಖರು ಕಾನೂನಿನ ಜ್ಞಾನ ಹೆಚ್ಚಿಸಿಕೊಳ್ಳಬೇಕೇಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.