ಶಿರಸಿ : ನೆಮ್ಮದಿ ರಂಗಧಾಮದಲ್ಲಿ ಜರುಗಿದ ನೂಪುರ ನೃತ್ಯಶಾಲೆಯ ನೂಪುರನಾದ 2025 ವಾರ್ಷಿಕ ನೃತ್ಯೋತ್ಸವ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಮೂಡಿಬಂದು ಜನ ಮನ ಸೂರೆಗೊಂಡಿತು
ಕಾರ್ಯಕ್ರಮವನ್ನು ಡಾ. ಜಿ ಎಂ ಹೆಗಡೆ ಉದ್ಘಾಟಿಸಿ ನೃತ್ಯದಿಂದಾಗುವ ವ್ಯಾಯಾಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಉಪಯುಕ್ತತೆ ಇದೆ ಎಂದು ಹೇಳಿದರು.
ನೃತ್ಯದಿಂದ ಉತ್ತಮ ಏಕಾಗ್ರತೆ, ಸ್ವಭಾವದಲ್ಲಿ ಮೃದು ವರ್ತನೆ, ಸಮಯ ಪ್ರಜ್ಞೆ, ಹಾಗೂ ನೃತ್ಯದಿಂದ ವ್ಯಾಯಾಮ ದೊರೆಯುವದರಿಂದ ದೈಹಿಕ ಶಕ್ತಿ ಇವೆಲ್ಲವೂ ದೊರೆಯುತ್ತದೆ. ನಮ್ಮ ದೇಶದ ಎಲ್ಲ ಕಲೆಯನ್ನು ಉಳಿಸಿ ಬೆಳೆಸಲು ಮುಂದಿನ ಪೀಳಿಗೆಗೆ ಕರೆ ಕೊಟ್ಟರು.
ಇನ್ನೋರ್ವ ಅತಿಥಿ ಶ್ರೀಮತಿ ಸಮುದ್ಯತ ವೆಂಕಟರಾಮು (ಗಮಕ ಕಲಾವಿದರು ) ಅವರು ಮಾತನಾಡಿ ನೃತ್ಯದಲ್ಲಿ ಸ್ಪರ್ಧಾತ್ಮಕ ಮನಸ್ಥಿತಿಗಿಂತ ಮನಸ್ಸಿನ ಖುಷಿಗಾಗಿ ನರ್ತಿಸಬೇಕು, ಅಸೂಯೆಯಿಂದ ಯಾರೂ ಯಾವ ಕಲೆಯನ್ನೂ ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ . ಕುಮಾರವ್ಯಾಸ ಭಾರತದ ಕೆಲವು ಪದ್ಯಗಳನ್ನು ಹಾಡಿದರು.
ಶ್ರೀಮತಿ ರೇಖಾ ಭಟ್ ಪ್ರಾರ್ಥಿಸಿದರು. ಶ್ರೀಮತಿ ಸವಿತಾ ಅಗಸೆ ಹಾಗೂ ಶ್ರೀಮತಿ ವನಜಾ ಅರವಿಂದ್ ಸ್ವಾಗತಿಸಿದರು. ನೃತ್ಯ ಶಿಕ್ಷಕಿ ಅನುರಾಧಾ ಹೆಗಡೆ ವಂದಿಸಿದರು. ವೇದಿಕೆಯಲ್ಲಿ ಶಂಕರ ಎನ್ ಜೋಷಿ ( ನೂಪುರ ಟ್ರಸ್ಟ್ ನ ಸಂಸ್ಥಾಪಕರು )ಹಾಗೂ ನೂಪುರ ಟ್ರಸ್ಟ್ ನ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಉಪಸ್ಥಿತರಿದ್ದರು.
ನೃತ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಲವು ಉನ್ನತ ಕೃತಿಗಳನ್ನು ಹಾಗೂ ಬಹು ನಿರೀಕ್ಷಿತ ಯಮುನಾ ಶಂಕರ ಜೋಶಿಯವರು ಬರೆದ “ಜೀವನಾವಸ್ಥಾ”ಆಧಾರದ ನೃತ್ಯ ರೂಪಕವನ್ನು ಮನೋಜ್ಞವಾಗಿ ಅಭಿನಯಿಸಿದರು.
ನೃತ್ಯ ಸಂಯೋಜನೆ ಹಾಗೂ ನಟುವಾಂಗ ವಿದುಷಿ ಅನುರಾಧಾ ಹೆಗಡೆ ಹಾಗೂ ವಿದುಷಿ ಕುಮಾರಿ ಕೀರ್ತನಾ ಹೆಗಡೆ, ಹಾಡುಗಾರಿಕೆ – ವಿದ್ವಾನ್ ರಾಜೀವ್ ಆರ್, ಮೃದಂಗದಲ್ಲಿ ವಿದ್ವಾನ್ ಸುಮಧುರ ಆನೂರ್, ಕೊಳಲಿನಲ್ಲಿ ವಿದ್ವಾನ್ ರಘು ಸಿಂಹ ಸಹಕರಿಸಿದರು.ಎಂ ಎಸ್ ಗೌಡ ಹಾಗೂ ವಿದುಷಿ ಶ್ರೀಮತಿ ಹೆಗಡೆ ನಿರೂಪಿಸಿದರು.