ಸಿದ್ದಾಪುರ: ಪಟ್ಟಣದ ಕೆಇಬಿ ಆವರಣದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣದಲ್ಲಿ ಮನೋಜ್ ಭಟ್ ಹೆಗ್ಗಾರಳ್ಳಿ ಸಂಯೋಜನೆಯಲ್ಲಿ ಚಂಪಾ ಷಷ್ಠಿ ಯಕ್ಷೋತ್ಸವದ ಅಂಗವಾಗಿ ಪ್ರದರ್ಶನಗೊಂಡ ಸತ್ಯ ಹರಿಶ್ಚಂದ್ರ ಯಕ್ಷಗಾನ ಬಯಲಾಟ ಕಲಾಸಕ್ತರ ಮೆಚ್ಚುಗೆಗಳಿಸಿತು.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಾಧವ ಭಟ್ಟ ಕೊಳಗಿ, ಶಂಕರ ಭಾಗ್ವತ್ ಯಲ್ಲಾಪುರ, ರಾಕೇಶ ಮಲ್ಯ ಹಳ್ಳಾಡಿ. ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಸುಬ್ರಹ್ಮಣ್ಯ ಚಿಟ್ಟಾಣಿ, ಅಶೋಕ ಭಟ್ಟ ಸಿದ್ದಾಪುರ, ಗಣಪತಿ ಹೆಗಡೆ ತೋಟಿಮನೆ, ಶಂಕರ ಹೆಗಡೆ ನೀಲ್ಕೋಡು, ಶ್ರೀಧರ ಹೆಗಡೆ ಚಪ್ಪರಮನೆ, ನಾಗೇಂದ್ರ ಮೂರೂರು, ಮಹಾಬಲೇಶ್ವರ ಭಟ್ಟ ಇಟಗಿ, ಸದಾಶಿವ ಮಲವಳ್ಳಿ, ಕು.ಅನ್ವಿತಾ ಇವರು ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.