ದಾಂಡೇಲಿ : ನಗರದ ಟಿಆರ್ಟಿ ಕ್ರಾಸ್ ಹತ್ತಿರ ಹಸನ್ಮಾಳಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ನಿರ್ಮಿಸಲಾದ ಯುಜಿಡಿ ಟ್ಯಾಂಕ್ ಮತ್ತು ಕಾಗದ ಕಾರ್ಖಾನೆಯ ಆವರಣ ಗೋಡೆಯ ಮಧ್ಯೆಯಿರುವ ಖಾಲಿ ಜಾಗವೀಗ ಓಪನ್ ಬಾರಾಗಿ ರೂಪುಗೊಂಡಿದೆ.
ಕಳೆದ ಹಲವು ದಿನಗಳಿಂದ ಇದು ಕುಡುಕರ ಅಡ್ಡೆಯಾಗಿದೆ. ಇಲ್ಲಿ ಎಲ್ಲಿ ನೋಡಿದರೂ ಮಧ್ಯದ ಖಾಲಿ ಬಾಟಲಿಗಳ ದರ್ಶನವಾಗುತ್ತದೆ. ಸಂಜೆಯಾಗುತ್ತಿದ್ದಂತೆಯೇ ಸರತಿಯಂತೆ ಕುಡುಕರು ಬಂದು ಇಲ್ಲಿ ಗಪ್ ಚುಪ್ ಆಗಿ ಎಣ್ಣೆ ಪಾರ್ಟಿಯನ್ನು ಮಾಡಿ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದೇ ರಸ್ತೆಯಲ್ಲಿ ಮಹಿಳೆಯರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಇಲ್ಲಿ ರಾತ್ರಿಯ ಸಮಯದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಕುಡುಕರಿಗೆ ಇದು ಪ್ಲಸ್ ಪಾಯಿಂಟ್ ಆಗಿದೆ.
ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂಬ ಆಗ್ರಹ ಸ್ಥಳೀಯವಾಗಿ ಕೇಳಿ ಬರುತ್ತಿದೆ. ಸಂಜೆಯಿಂದ ತಡ ರಾತ್ರಿಯವರಿಗೆ ಐದಾರು ಬಾರಿ ಪಿಎಸ್ಐ ಜೀಪು ಈ ರಸ್ತೆಯಲ್ಲಿ ಅಡ್ಡಾಡಿದ್ದಲ್ಲಿ ಯೋಗ್ಯ ವಾತಾವರಣ ನಿರ್ಮಾಣವಾಗಲು ಸಾಧ್ಯವಿದೆ.