ಸಿದ್ದಾಪುರ: ತಾಲೂಕು ಮಡಿವಾಳ ಯುವ ವೇದಿಕೆ ರಚನೆ ಮಾಡಲಾಗಿದ್ದು ವೇದಿಕೆ ರಚನೆಯಿಂದ ಸಮಾಜದ ಯುವಕರನ್ನು ಸಂಘಟಿಸಲು ಹೆಚ್ಚು ಅನುಕೂಲವಾಗಲಿದೆ ಎಂದು ಜಿಲ್ಲಾ ಮಡಿವಾಳ ಯುವ ವೇದಿಕೆ ಅಧ್ಯಕ್ಷ ವಿಶ್ವ ಗಜಾನನ ಮಡಿವಾಳ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಅವರು ಮಡಿವಾಳ ಯುವಸಂಘಟನೆ ಹಿಂದೆ ರಚನೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಘಟನೆ ಕ್ರೀಯಾಶೀಲವಾಗಿರಲಿಲ್ಲ. ಸಮಾಜದ ಯುವಕರನ್ನು ಸಂಘಟಿಸಲು ಇಂತಹ ವೇದಿಕೆಯ ಅವಶ್ಯಕತೆ ಇತ್ತು. ರಾಜ್ಯ ಸಂಘಟನೆಯು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು ಹೀಗಾಗಿ ಅವರ ಸೂಚನೆಯಂತೆ ಪುನಃ ಸಂಘಟನೆಯನ್ನು ರಚಿಸಲಾಗಿದೆ.
ನಮ್ಮ ಸಮಾಜಕ್ಕೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಈಗಾಗಲೇ ಹಿರಿಯರ ಸಂಘಟನೆ ಉತ್ತಮವಾಗಿದೆ. ಅವರ ಮಾರ್ಗದರ್ಶನದಲ್ಲಿ ಯುವ ಸಂಘಟನೆಯನ್ನು ಕಟ್ಟಲಾಗುವುದು. ಒಂದು ಸಾವಿರಕ್ಕೂ ಹೆಚ್ಚು ಸದಸ್ಯರು ನಮ್ಮ ಸಂಘದಲ್ಲಿ ನೊಂದಾಯಿಸಿದ್ದಾರೆ. ನಾಗಭೂಷಣ ಮಡಿವಾಳ ಕೊಂಡ್ಲಿ ಅವರನ್ನು ಅಧ್ಯಕ್ಷರನ್ನಾಗಿ, ವಿರೇಶ ಚೌಡಾ ಮಡಿವಾಳ ಹಿತ್ತಲಕೊಪ್ಪ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಜ.6ರಂದು ಚಿತ್ರದುರ್ಗದಲ್ಲಿ ನಮ್ಮ ಸಮಾಜದ ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಕಾಯಕ ಜನೋತ್ಸವ ಕಾರ್ಯಕ್ರಮ ನಡೆಯಲಿದ್ದು ತಾಲೂಕಿನಿಂದ ಹೆಚ್ಚಿನ ಸಮಾಜ ಬಾಂಧವರು ಭಾಗವಹಿಸಬೇಕು. ಫೆ. ತಿಂಗಳ ಮೊದಲವಾರದಲ್ಲಿ ತಾಲೂಕಿನಲ್ಲಿ ಮಡಿವಾಳ ಸಮಾಜದ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.
ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಪಿ.ಬಿ.ಹೊಸೂರು, ಯುವವೇದಿಕೆಯ ಮಾಜಿ ಅಧ್ಯಕ್ಷ ಕೆ.ಟಿ.ಹೊನ್ನೆಗುಂಡಿ, ಯುವವೇದಿಕೆಯ ತಾಲೂಕು ಘಟಕದ ಪ್ರದಾನ ಕಾರ್ಯದರ್ಶಿ ವಿರೇಶ ಚೌಡಾ ಮಡಿವಾಳ,ಪ್ರಮುಖರಾದ ಅಣ್ಣಪ್ಪ ಮಡಿವಾಳ ಬಲೆಗಾರ, ಮಂಜುನಾಥ ಮಡಿವಾಳ ಕೊಂಡ್ಲಿ ಇತರರಿದ್ದರು.