Slide
Slide
Slide
previous arrow
next arrow

ಸಿದ್ದಾಪುರ ತಾಲೂಕಿನ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ : ಡಿಡಿಪಿಐ ಬಸವರಾಜ

300x250 AD

ಸಿದ್ದಾಪುರ :- ಸಿದ್ದಾಪುರ ತಾಲೂಕಿನ ಶೈಕ್ಷಣಿಕ ವ್ಯವಸ್ಥೆ ಉತ್ತಮವಾಗಿದ್ದು ಇಲ್ಲಿನ ಶಿಕ್ಷಕರ ಕ್ರಿಯಾಶೀಲತೆಯಿಂದ ಇದು ಸಾಧ್ಯವಾಗಿದೆ.ಇವರಲ್ಲಿ ಪ್ರತಿಶತ ಎಪ್ಪತ್ತರಷ್ಟು ಮಹಿಳಾ ಶಿಕ್ಷಕರಿದ್ದು, ಇವರು ಮಾತೃ ಹೃದಯದಿಂದ ಮಕ್ಕಳಿಗೆ ಬೋಧಿಸುತ್ತಿದ್ದು ಶೈಕ್ಷಣಿಕ ಸಾಧನೆಗೆ ಮಹಿಳಾ ಶಿಕ್ಷಕರ ಕೊಡುಗೆ ಸಾಕಷ್ಟಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಪಿ. ಬಸವರಾಜ ಹೇಳಿದರು.

ಇವರು ಸಿದ್ದಾಪುರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡುವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು.
ತಾಲೂಕಿನ ಹದಿನೆಂಟು ಕ್ಲಸ್ಟರ್‌ಗಳ ಹದಿನೆಂಟು ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘ ಹಾಗೂ ಇಲಾಖೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಸದಾ ಅವಕಾಶ ಹಾಗೂ ಪ್ರೋತ್ಸಾಹ ನೀಡುತ್ತಿರುವ ಶಂಕರ ಮಠದ ಧರ್ಮಾಧಿಕಾರಿಗಳಾದ ವಿಜಯ ಹೆಗಡೆ ಇವರನ್ನು ಇಲಾಖೆ ಹಾಗೂ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಂಕರ ಮಠದ ಧರ್ಮದರ್ಶಿ ವಿಜಯ ಹೆಗಡೆ ದೊಡ್ಮನೆ, ಎಂ.ಕೆ.ಮೊಗೇರ, ಚೈತನ್ಯಕುಮಾರ ಕೆ.ಎಂ, ಬಾಲಚಂದ್ರ ಪಟಗಾರ, ಎಂ.ವಿ.ನಾಯ್ಕ ಸತೀಶ ಹೆಗಡೆ, ನಾಗರಾಜ ಮಡಿವಾಳ, ವಿಜಯಲಕ್ಷ್ಮಿ ಬಿ, ನಮೃತ ವಿ, ಬಸವರಾಜ ಕಡಪಟ್ಟಿ, ಮೇಧಾ ಹೆಗಡೆ, ಸುಜಾತಾ ಎಚ್, ಸಹನಾ ಬಿ.ಎಲ್, ವಂದನಾ ಕಲಭಾಗ,ಯಶೋಧ ಭಟ್, ಅನ್ನಪೂರ್ಣ ಅಡಕೆಪಾಲ್ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷರಾದ ಸತೀಶ ಹೆಗಡೆ ಸ್ವಾಗತಿಸಿದರು, ಕಾರ್ಯದರ್ಶಿ ಗುರುರಾಜ ನಾಯ್ಕ ನಿರೂಪಿಸಿದರು, ಸಹ ಕಾರ್ಯದರ್ಶಿ ವಿಜಯಲಕ್ಷ್ಮಿ ಬಿ. ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top