Slide
Slide
Slide
previous arrow
next arrow

ಜೀವ ವೈದ್ಯಕೀಯ ತ್ಯಾಜ್ಯಗಳ ವೈಜ್ಞಾನಿಕ ನಿರ್ವಹಣೆ, ವಿಲೆವಾರಿ ಕುರಿತು ತರಬೇತಿ

300x250 AD

ಕಾರವಾರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ, ಕಾರವಾರ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ (ಕಾರವಾರ / ಶಿರಸಿ), ಹಾಗೂ ಸಾಮೂಹಿಕ ಜೀವ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಹಾಗೂ ಖಾಸಗಿ ಆರೋಗ್ಯ ಘಟಕಗಳಿಗೆ, ಜೀವ ವೈದ್ಯಕೀಯ ತ್ಯಾಜ್ಯಗಳ ವೈಜ್ಞಾನಿಕ ನಿರ್ವಹಣೆ, ವ್ಯವಸ್ಥಾಪನೆ ಹಾಗೂ ವಿಲೇವಾರಿ ಕುರಿತು ತರಬೇತಿ ಕಾರ್ಯಕ್ರಮವು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಬೆಂಗಳೂರಿನ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರ ಬಾಬು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವ ವೈದ್ಯಕೀಯ ತ್ಯಾಜ್ಯದ ಪರಿಣಾಮಕಾರಿ ವಿಂಗಡಣೆ, ನಿರ್ವಹಣೆ, ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವುದರ ಕುರಿತಾಗಿ ಎಲ್ಲಾ ನೊಡೆಲ್ ಅಧಿಕಾರಿಗಳು, ಜಿಲ್ಲೆಯ ಎಲ್ಲ ಸರ್ಕಾರಿ / ಖಾಸಗಿ ಆಸ್ಪತ್ರೆಗಳ, ಆರೋಗ್ಯ ಘಟಕಗಳ ವೈದ್ಯರು, ನರ್ಸಗಳಿಗೆ ತರಬೇತಿ ನೀಡಿದರು.
ಎಲ್ಲ ಆರೋಗ್ಯ ಘಟಕಗಳು ಜೀವ ವೈದ್ಯಕೀಯ ತ್ಯಾಜ್ಯಗಳನ್ನು ಸಾಮೂಹಿಕ ಜೀವ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕ (Kenera(IMA)CBMWTF,Ankola) ವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಜೀವ ವೈದ್ಯಕೀಯ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕಾಗಿರುತ್ತದೆ. ಬಾರ್ ಕೋಡ್ ವ್ಯವಸ್ಥೆಯನ್ನು ಎಲ್ಲ ಆರೋಗ್ಯ ಘಟಕಗಳು ಹಾಗೂ ಸಾಮೂಹಿಕ ಜೀವ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳು ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರನ್ವಯ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

300x250 AD

ತರಬೇತಿಯಲ್ಲಿ ಅಂಕೋಲಾದ ಕೆನರಾ ಐಎಮ್‌ಎ, ಕಾಮನ್ ಬಯೋಮೆಡಿಕಲ್ ವೆಸ್ಟ್ ಮೆನೆಜ್‌ಮೆಂಟ್ ಅಧ್ಯಕ್ಷ ಡಾ.ಎನ್.ವಿ ನಾಯಕ, ಕಾರ್ಯದರ್ಶಿ ಡಾ.ನೀತಿನ್ ಪಿಕಳೆ, ಕಾರವಾರ ಐಎಮ್‌ಎ ಅಧ್ಯಕ್ಷ ಸುರೇಶ್ ಭಟ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನ್ನಪೂರ್ಣ ವಸ್ತçದ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಮೋಹನ ಕುಮಾರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಶೆಟ್ಟಿ , ನೊಡೆಲ್ ಅಧಿಕಾರಿಗಳು, ಜಿಲ್ಲೆಯ ಎಲ್ಲ ಸರ್ಕಾರಿ / ಖಾಸಗಿ ಆಸ್ಪತ್ರೆಗಳ, ಆರೋಗ್ಯ ಘಟಕಗಳ ವೈದ್ಯರು, ನರ್ಸ್ಗಳು ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿ ಬಿ.ಕೆ., ಸಂತೋಷ್ ಪ್ರ಼ಸ್ತಾವಿಕವಾಗಿ ಮಾತನಾಡಿದರು. ಡಿ.ಎಚ್.ಇ.ಒ ಬಸವರಾಜ ಸ್ವಾಗತಿಸಿ, ನಿರೂಪಿಸಿದರು. ಕರಾಮಾನಿ ಮಂಡಳಿಯ ಯೋಜನಾ ಸಹಾಯಕಿ ಡಾ. ಅಮೃತಾ ಶೇಟ್ ವಂದಿಸಿದರು.

Share This
300x250 AD
300x250 AD
300x250 AD
Back to top