ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ರೈಲ್ವೆ ಸ್ಟೇಷನ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನನ್ನು ಬಂಧಿಸಿ, ಮಾಲನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ನಗರ ಠಾಣೆಯ ಪೋಲಿಸರು ನಡೆಸಿದ ಕಾರ್ಯಚರಣೆಯಲ್ಲಿ ಅಂಬೇವಾಡಿಯಲ್ಲಿರುವ ರೈಲ್ವೆ ಸ್ಟೇಷನ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಬೈಲಪಾರ್ ನಿವಾಸಿ ಫೈರೋಜ್ ಯಾಸಿನ್ ಯರಗಟ್ಟಿ (ವ:22) ಎಂಬಾತನನ್ನು ಬಂಧಿಸಿ ಆತನಿಂದ 40 ಸಾವಿರ ರೂ ಬೆಲೆಯ 536 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೋಲಿಸ್ ಉಪ ನಿರೀಕ್ಷಕರಾದ ಅಮೀನಸಾಬ್ ಅತ್ತಾರ ದೂರು ದಾಖಲಿಸಿದ್ದಾರೆ.