ಹೊನ್ನಾವರ: ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿರುವ ಕಿಶೋರ ನಾಯ್ಕ ಇವರಿಗೆ ಪ್ರಸಕ್ತ ಸಾಲಿನ ಜ್ಞಾನ ಸಂಜೀವಿನಿ ಪ್ರಶಸ್ತಿಯು ಲಭಿಸಿರುತ್ತದೆ. ಶಿಕ್ಷಣ ಜ್ಞಾನ ಪತ್ರಿಕೆಯವರು ರಾಜ್ಯ ಮಟ್ಟದಲ್ಲಿ ಉತ್ತಮ ಉಪನ್ಯಾಸಕರನ್ನು ಗುರುತಿಸಿ ನೀಡುವ ಪ್ರಶಸ್ತಿಯಾಗಿದ್ದು, ಕಿಶೋರ ನಾಯ್ಕ ಇವರು ಸಾಂಸ್ಕೃತಿಕ, ಕ್ರೀಡೆ ಎರಡರಲ್ಲೂ ಸ್ವತಃ ಪಾಲ್ಗೊಂಡು ಜಿಲ್ಲಾ ಮಟ್ಟದಲ್ಲಿ ಗುರುತಿಸಿ ಕೊಂಡದ್ದಲ್ಲದೇ, ವಿದ್ಯಾರ್ಥಿಗಳನ್ನೂ ತೊಡಗಿಸುತ್ತ ಬಂದಿದ್ದಾರೆ.