ದಾಂಡೇಲಿ : ನಗರದ ಪ್ರಮುಖ ವೃತ್ತಗಳಲ್ಲಿ ಒಂದಾಗಿರುವ ಸೋಮಾನಿ ವೃತ್ತದ ಹತ್ತಿರ ನಡು ರಸ್ತೆಯಲ್ಲಿ ಕುಡುಕನೊಬ್ಬನ ಅವಾಂತರದಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ರಸ್ತೆ ಮಧ್ಯದಲ್ಲಿ ಕುಡಿದು ತೂರಾಡುತ್ತಿರುವ ಈ ವ್ಯಕ್ತಿಯಿಂದಾಗಿ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ನಾಲ್ಕು ರಸ್ತೆಗಳು ಕೂಡುವ ವೃತ್ತ ಇದಾಗಿದ್ದು, ವಾಹನಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಸಂಚರಿಸುತ್ತದೆ. ಕೂಡಲೇ ಪೊಲೀಸರು ಇಂಥವರ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.