ಹೊನ್ನಾವರ; ಹುಡುಗಿಯೊರ್ವಳಿಗೆ ಅಶ್ಲೀಲ ಸಂದೇಶವನ್ನು ರವಾನಿಸುತ್ತಿದ್ದ ಗ್ರಾ.ಪಂ. ಸದಸ್ಯನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಸಂಭವಿಸಿದೆ.
ಮೊಬೈಲ್ ನಂಬರ್ ಪಡೆದುಕೊಂಡು ಅಶ್ಲೀಲ ಸಂದೇಶ ರವಾನಿಸುವ ಕೆಟ್ಟ ಚಾಳಿ ರೂಡಿಸಿಕೊಂಡಿದ್ದ. ಈ ಬಗ್ಗೆ ಎಚ್ಚರಿಸಿದಾಗ ಕುಮಟಾ ಭಾಗದ ರಾಜಕೀಯ ಮುಖಂಡರೊರ್ವರ ಆತ್ಮೀಯರಾಗಿವುದರಿಂದ ಅವರ ಗಮನಕ್ಕೆ ತಂದು, ಬುದ್ದಿ ಹೇಳಿದರೂ ಈ ಚಾಳಿ ನಿಲ್ಲಿಸದೇ ಇರುವುದರಿಂದ ಯುವಕರೇ ಮುಂದಾಗಿ ಧರ್ಮದೇಟು ನೀಡಿದ್ದಾರೆ. ಕಾಮುಕ ಸಾಲ್ಕೋಡ್ ಗ್ರಾ.ಪಂ. ಸದಸ್ಯನಾಗಿದ್ದು, ಊರಿಗೆ ಮಾದರಿಯಾಗಬೇಕಾದವನು ಮಾಡಿದ ಅಸಹ್ಯ ಕೆಲಸಕ್ಕೆ ಎಲ್ಲಡೆ ಛೀಮಾರಿ ವ್ಯಕ್ತವಾಗುತ್ತಿದೆ.