ಸಿದ್ದಾಪುರ: ದೀರ್ಘಕಾಲದಿಂದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಗ್ರಾಮೀಣ ಅಭಿವೃದ್ಧಿಯಲ್ಲಿ ತಮ್ಮದೇ ಆದ ಸೇವಾ ವಿಶಿಷ್ಟ ಸ್ಥಾನ ರೂಪಿಸಿರುವ ತಾಲೂಕಿನ ಮಸಗುತ್ತಿಯ ಶಂಕರ ಸುಬ್ರಾಯ ಭಟ್ಟ ಇವರಿಗೆ ಬೆಂಗಳೂರಿನಲ್ಲಿ ನಡೆದ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶಂಕರ ಭಟ್ಟ ಇವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರ ಸೇರಿದಂತೆ ಗ್ರಾಮ ಮತ್ತು ಸೀಮೆಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ತಮ್ಮ 94ನೇ ವಯಸ್ಸಿನಲ್ಲಿಯೂ ಕ್ರೀಯಾಶೀಲತೆಯಿಂದ ತಮ್ಮನ್ನು ತೊಡಗಿಸಿಕೊಂಡು ಇಂದಿನ ಯುವ ಸಮೂಹಕ್ಕೆ ಮಾದರಿ ಆಗಿದ್ದಾರೆ