ಹೊನ್ನಾವರ: ತಾಲೂಕಿನ ಪ್ರತಿಷ್ಠಿತ ಕೆಳಗಿನೂರು ವಿಎಸ್ಎಸ್ ಸೊಸೈಟಿ ಚುನಾವಣೆಯಲ್ಲಿ ಇತ್ತೀಚಿಗೆ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಹಾಲಿ ಸಹಕಾರಿಯ ಅಧ್ಯಕ್ಷರಾಗಿದ್ದ ಗಣಪ್ಪಯ್ಯ ಗೌಡ ಮುಗಳಿ ಬಣಕ್ಕೆ ಸ್ಪಷ್ಟ ಬಹುಮತ ಲಭಿಸಿದೆ.
ಈ ಹಿಂದೆ ಇರುವ ನಿರ್ದೇಶಕ ಮಂಡಳಿ ಕೆಲವು ನಿರ್ದೇಶಕರು ಗಣಪ್ಪಯ್ಯ ಗೌಡ ಬಣದ ವಿರುದ್ಧ ತಿರುಗಿ ಬಿದ್ದು ಪ್ರತ್ಯೇಕ ಸ್ಪರ್ಧೆ ಮಾಡಿದ್ದರು. ತೀವ್ರ ಪ್ರತಿರೋಧ ತೋರಿದ ಇವರು ಎರಡು ನಿರ್ದೇಶಕರು ಆಯ್ಕೆಯಾಗಿದ್ದು, ಇನ್ನುಳಿದವರು ಗರಿಷ್ಠ ಮತ ಪಡೆದು ಪರಾಜಿತಗೊಂಡಿದ್ದಾರೆ.