ಶಿರಸಿ: ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕೊರ್ಸೆ (ಬಿಸ್ಲಕೊಪ್ಪ) ಗಣೇಶ ಸುಬ್ರಾಯ ಹೆಗಡೆ ಕೊರ್ಸೆ ಉತ್ತೀರ್ಣನಾಗುವ ಮೂಲಕ ಅದ್ವಿತೀಯ ಸಾಧನೆಗೈದಿದ್ದಾನೆ. ಈತನು ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಗ್ರಾಮಾಂತರ ಭಾಗದಲ್ಲಿ ಶಿಕ್ಷಣ ಪಡೆದು, ಇದೀಗ ಸಿಎ ಪರೀಕ್ಷೆಯನ್ನು ಉತ್ತೀರ್ಣಗೊಳಿಸಿದ್ದಾರೆ. ಈತನು ಶ್ರೀಮತಿ ಭಾರತಿ ಮತ್ತು ಸುಬ್ರಾಯ ಹೆಗಡೆ ಕೊರ್ಸೆ(ತಟ್ಟಿಸರ) ದಂಪತಿಯ ಪುತ್ರನಾಗಿದ್ದು, ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಪಿ.ಎಂ. ಆನಂದ್ & ಕಂ. ಇವರ ಬಳಿಯಲ್ಲಿ ಆರ್ಟಿಕಲ್ ಶಿಪ್ ಪೂರ್ಣಗೊಳಿಸಿದ್ದರು. ಈತನ ಸಾಧನೆಗೆ ಮನೆಯವರು ಹಾಗೂ ತಟ್ಟಿಸರ ಕುಟುಂಬದವರು ಹಿತೈಷಿಗಳು ಶುಭಕೋರಿ, ಹಾರೈಸಿದ್ದಾರೆ.