ಶಿರಸಿ: ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯಲ್ಲಿ ತಾಲೂಕಿನ ತಾರಗೋಡಿನ ಗುರುಪ್ರಸಾದ ದಿವಸ್ಪತಿ ಭಟ್ ಉತ್ತೀರ್ಣನಾಗುವ ಮೂಲಕ ಅದ್ವಿತೀಯ ಸಾಧನೆಗೈದಿದ್ದಾನೆ. ಈತನು ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಗ್ರಾಮಾಂತರ ಭಾಗದಲ್ಲಿ ಶಿಕ್ಷಣ ಪಡೆದು, ಇದೀಗ ಸಿಎ ಪರೀಕ್ಷೆಯನ್ನು ಉತ್ತೀರ್ಣಗೊಳಿಸಿದ್ದಾರೆ. ಈತನು ತಾರಗೋಡಿನ ಶ್ರೀಮತಿ ಸುಮಂಗಲ ಮತ್ತು ದಿವಸ್ಪತಿ ಭಟ್ಟ ದಂಪತಿಯ ಪುತ್ರನಾಗಿದ್ದು, ಶಿರಸಿಯ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ತಿಮ್ಮಯ್ಯ ಹೆಗಡೆ ಇವರ ಬಳಿಯಲ್ಲಿ ಆರ್ಟಿಕಲ್ ಶಿಪ್ ಪೂರ್ಣಗೊಳಿಸಿದ್ದರು. ಈತನ ಸಾಧನೆಗೆ ಪೋಷಕರು, ಹಿತೈಷಿಗಳು ಶುಭಕೋರಿ, ಹಾರೈಸಿದ್ದಾರೆ.