ದಾಂಡೇಲಿ : ಸಂವಿಧಾನ ಶಿಲ್ಪಿ ಭಾರತ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಹಗುರವಾಗಿ ಮಾತನಾಡಿರುವ ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಮತ್ತು ದೇಶದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕರ್ನಾಟಕ ಬಹುಜನ ಚಳುವಳಿ ಸಂಘವು ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಮೂಲಕ ನೀಡಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಬಹುಜನ ಚಳುವಳಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದೇವೇಂದ್ರ ಕೆ.ಮಾದರ, ರಾಜ್ಯ ಕಾರ್ಯದರ್ಶಿಗಳಾದ ರವಿಕುಮಾರ್ ದಂಡಗಿ ಮತ್ತು ಸಂಗಣ್ಣ ಬೋವಿ, ಸಂಘಟನೆಯ ರಾಜ್ಯ ಯುವ ಘಟಕದ ಸಂಚಾಲಕರಾದ ರಾಮಚಂದ್ರ ಕಾಂಬಳೆ, ಸಂಘಟನೆಯ ಪದಾಧಿಕಾರಿಗಳಾದ ಅಲ್ಲಾಭಕ್ಷು ಮಸುತಿ, ಅಬ್ದುಲ್ ರಜಾಕ್ ಖಾನ್, ವಿನಾಯಕ ಬಾರಕೇರ, ಸುರೇಂದ್ರ ಕಾಂಬಳೆ, ಈರಯ್ಯ ಕಾಂಬಳೆ, ಪರಶುರಾಮ ಪಾತ್ರೋಟ್, ಈರಯ್ಯಾ ಎಸ್.ಕಲ್ಯಾಣಿ ಮೊದಲಾದವರು ಉಪಸ್ಥಿತರಿದ್ದರು.