ಭಾರತೀಯ ಜನತಾ ಪಾರ್ಟಿ ರೈತ ಮೊರ್ಚಾ ಉತ್ತರ ಕನ್ನಡ, ಅಂಕೋಲಾ ಮಂಡಲ,ಡೊಂಗ್ರಿ ಶಕ್ತಿ ಕೇಂದ್ರ, ಹೆಗ್ಗಾರ ಬೂತ್ ಸಹಯೋಗದಲ್ಲಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯನ್ನು ಕಲ್ಲೇಶ್ವರದಲ್ಲಿ ಆಚರಿಸಲಾಯಿತು.
ರೈತ ಮೊರ್ಚಾ ಜಿಲ್ಲಾ ಕಾರ್ಯದರ್ಶಿ ವಿ.ಎಸ್.ಭಟ್ಟ ಕಲ್ಲೇಶ್ವರ ಮಾತನಾಡಿ ವಾಜಪೇಯಿ ದೇಶ ಕಂಡ ಅತ್ಯಂತ ದೂರದೃಷ್ಟಿ ಹೊಂದಿರುವ ಪ್ರಾಮಾಣಿಕ ರಾಜಕಾರಿಣಿಯಾಗಿದ್ದರು. ಸುವರ್ಣ ಚತುಷ್ಪಥ ಹೆದ್ದಾರಿಯ ರೂವಾರಿಗಳು, ಸಂಸತ್ತಿನಲ್ಲಿ ಅವರ ಅದ್ಭುತ ಮಾತುಗಾರಿಕೆ ಇಂದ ಪ್ರಸಿದ್ಧರಾಗಿದ್ದರು ಎಂದು ಹೆಳಿದರು.
ಈ ಸಂದರ್ಭದಲ್ಲಿ ಹೆಗ್ಗಾರ ಬೂತ್ ಅಧ್ಯಕ್ಷ ಶೇಖರ್ ಗಾಂವ್ಕರ ಮಾತನಾಡಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ವಾಜಪೇಯಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ಇಂದಿಗೂ ಕೂಡ ಅವಿಸ್ಮರಣೀಯ ಎಂದು ಹೇಳಿದರು. ಬೂತ್ ಕಾರ್ಯದರ್ಶಿ ರಾಘವೇಂದ್ರ ಹೆಗಡೆ,ಡೊಂಗ್ರಿ ಪಂಚಾಯತ ಸದಸ್ಯ ರಾದ ಮೋಹನ ಪಟಗಾರ,ಸ್ಥಳೀಯ ಪ್ರಮುಖ ರಾದ ಬಾಲಚಂದ್ರ, ಪ್ರಕಾಶ ಶೆಟ್ಟಿ, ಬಾಸ್ಕರ ಗುನಗ ಮುಂತಾದ ದವರು ಇದ್ದರು.