Slide
Slide
Slide
previous arrow
next arrow

ಕ್ರೀಡೆಯಿಂದ ನೌಕರರಲ್ಲಿ ಹೊಂದಾಣಿಕೆ ಸಾಧ್ಯ: ಪ್ರವೀಣ್ ಕರಾಂಡೆ

300x250 AD

ಹೊನ್ನಾವರ : ಸರ್ಕಾರಿ ನೌಕರರು ಒಂದೆಡೆ ಸೇರಿ ಕೆಲಸದ ಹೊರತಾಗಿ ಕ್ರೀಡೆಗಳಲ್ಲಿ ಭಾಗಿಯಾದಾಗ ನಮ್ಮಲ್ಲಿ ಎಲ್ಲಾ ಇಲಾಖಾ ನೌಕರರ ಪರಿಚಯವಾಗಿ ಈ ಹೊಂದಾಣಿಕೆಯೇ ಮುಂದೆ ಸಾರ್ವಜನಿಕರ ಕೆಲಸದಲ್ಲೂ ಉತ್ತಮ ಸೇವೆ ಸಲ್ಲಿಸಲು ಅವಕಾಶವಾಗುತ್ತದೆ ಎಂದು ತಹಸೀಲ್ದಾರ್ ಪ್ರವೀಣ್ ಕರಾಂಡೆ ಹೇಳಿದರು.

ಅವರು ನೌಕರರ ಸಭಾಭವನದಲ್ಲಿ EPL Season 3 ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾಟದ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.ನನ್ನ ನೆಚ್ಚಿನ ಕ್ರೀಡೆ ಕ್ರಿಕೆಟ್, ಈ ಆಟದಲ್ಲಿ ಭಾಗವಹಿಸಲು ನಾನು ಯಾವಾಗಲೂ ಉತ್ಸುಕನಾಗಿರುತ್ತೇನೆ, ಮುಂದೆ ಈ ಕ್ರಿಕೆಟ್ ಪಂದ್ಯಾಟ ಇನ್ನೂ ಹೆಚ್ಚು ಜನಪ್ರಿಯವಾಗಿ, ಅದ್ಧೂರಿಯಾಗಿ ಆಯೋಜನೆ ಮಾಡಲು ನಾನು ಕೂಡ ಸಹಕರಿಸುತ್ತೇನೆ ಎಂದು ಹೇಳಿದರು.

ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಎಮ್. ಮಾತನಾಡಿ ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡಿರುವ ಬಗ್ಗೆ ನೆನಸಿಕೊಂಡು, ಈ ಪಂದ್ಯಾಟದಲ್ಲಿ ನಾನು ಕೂಡ ಆಟಗಾರನಾಗಿ ಭಾಗಿಯಾಗಿ ಪಂದ್ಯಾಕೂಟದ ಯಶಸ್ಸಿಗೆ ಶುಭಕೋರುತ್ತೇನೆ ಎಂದರು.

ಕ್ಷೇತ್ರ ಶಿಕ್ಷಣಾಧಿ ಜಿ.ಎಸ್.ನಾಯ್ಕ ಮಾತನಾಡಿ ಈ ಕ್ರಿಕೆಟ್ ಪಂದ್ಯಾಟದ ಆರಂಭದ ಆವೃತ್ತಿಯಿಂದಲೂ ಕೂಡ ನಾನು ಜೊತೆಯಾಗಿ ಸಹಕಾರ ನೀಡುತ್ತಾ ಬಂದಿದ್ದು, ಇದರ ಯಶಸನ್ನ ಪ್ರತ್ಯಕ್ಷವಾಗಿ ನೋಡಿದವನಿದ್ದೇನೆ. ಈ ಕ್ರಿಕೆಟ್ ಪಂದ್ಯಾಟ ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ, ಎಲ್ಲಾ ತಾಲೂಕಿಗೆ ಮಾದರಿಯಾಗಿ ಹೊರಹೊಮ್ಮುತ್ತಿದೆ. ಹೀಗೆ ವರ್ಷಂಪ್ರತಿ ಯಶಸ್ಸು ಮುಂದುವರಿಯಲಿ ಎಂದು ಹಾರೈಸಿದರು.

ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಆರ್. ಟಿ.ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ಮುಕ್ರಿ ಮಾತನಾಡಿದರು.

300x250 AD

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆಯನ್ನು ಚುನಾವಣಾಧಿಕಾರಿಯಾಗಿ ಯಶಸ್ವಿಯಾಗಿ ನಡೆಸಿಕೊಟ್ಟ ಕೃಷಿ ಅಧಿಕಾರಿ ಶ್ರೀಮತಿ ಪುನೀತಾ ಎಸ್.ಬಿ. ಹಾಗೆಯೇ ಸಹಾಯಕ ಚುನಾವಣಾಧಿಕಾರಿಯಾಗಿದ್ದ ಪಂಚಾಯತ ಅಭಿವೃದ್ಧಿ ಅಧಿಕಾರಿ ಹೆರಂಗಡಿ ಚನ್ನಬಸಪ್ಪ ಮಹಾಜನ ಶೆಟ್ಟಿ, ಇವರನ್ನು ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು..

EMPLOYEES PREMIER LEAGUE 2025 Season 3 ರ ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾಟ ಜನವರಿ 12,13,14 ರಂದು ಶ್ರೀ ಮಹಾಸತಿ ಮೈದಾನ, ಸಂತೆಗುಳಿ ಹೊನ್ನಾವರದಲ್ಲಿ ಆಯೋಜಿಸಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಸುದೀಸ್ ನಾಯ್ಕ್ ಸ್ವಾಗತಿಸಿದರು. SADHO ಸೂರ್ಯಕಾಂತ್ ವಡೇರ, ತಾಲೂಕ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ್ , ರಾಜ್ಯ ಪರಿಷತ್ ಸದಸ್ಯ ರಘು ನಾಯ್ಕ್, ಖಜಾಂಜಿ ನಾಗಪ್ಪ ಕೊಟೂರ, PDO ಸಂಘದ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ವೆಂಕಟ್ರಮಣ ಹಳದೀಪುರ, ಉದಯ್ ಬಾಂದೇಕರ್, ಶ್ರೀಧರ್ ಹಾಗೂ ಎಳು ತಂದದ ಮಾಲೀಕರು, ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಪಟಗಾರ ಹಾಜರಿದ್ದರು. ಏಳು ತಂಡದ ಮಾಲಕರು ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಆಟಗಾರರನ್ನು ಆಯ್ಕೆ ಮಾಡಿಕೊಂಡರು..

Share This
300x250 AD
300x250 AD
300x250 AD
Back to top