ದಾಂಡೇಲಿ : ನಗರದ ಸುಭಾಷ ನಗರದಲ್ಲಿರುವ ನೂರ್ ಇಸ್ಲಾಂ ರಿಲಿಜಿಯಸ್ ಮತ್ತು ಎಜುಕೇಶನ್ ಟ್ರಸ್ಟ್ ಇವರ ಆಶ್ರಯದಡಿ ಅಯೋಜಿಸಲಾಗಿದ್ದ ಮುಸ್ಲಿಂ ಧರ್ಮ ಬಾಂಧವರ ಫೈಝಾನೆ ಮದೀನಾ ಸಮಾವೇಶವು ಭಾನುವಾರ ನಸುಕಿನ ಸಂಪನ್ನಗೊಂಡಿತು.
ಶನಿವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಂಪೀರ್ ಖಾದ್ರಿ ಅವರು ಪರಸ್ಪರ ಸೌಹಾರ್ದತೆಯ ಭಾರತ ನಿರ್ಮಾಣದ ರೂವಾರಿಗಳು ನಾವಾಗಬೇಕು. ಭಗವಂತ ಕರುಣಿಸಿದ ಸಂಪತ್ತನ್ನು ಸಂಕಷ್ಟದಲ್ಲಿದ್ದವರ ಕಣ್ಣೀರನ್ನೊರೆಸಲು ಸದ್ಭಳಕೆ ಮಾಡಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ನಮ್ಮ ಜೀವನ ಇನ್ನೊಬ್ಬರಿಗೆ ನೆರವಾಗುವ ಜೀವನವಾದಾಗ ಮಾತ್ರ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯ. ನಾವು ಮಾಡುವ ದಾನ ಒಬ್ಬರ ಬದುಕಿಗೆ ಆಸರೆಯಾಗಬೇಕೆಂದ ಅವರು ಇಂದು ಇಂಟರ್ನೆಟ್ ಕಾಲ. ಅಂಗೈಯಲ್ಲಿ ಜಗತ್ತನ್ನು ನೋಡುವ ಕಾಲಘಟ್ಟದಲ್ಲಿದ್ದೇವೆ. ಈ ನಿಟ್ಟಿನಲ್ಲಿ ನಾವು ಹಣ, ಆಸ್ತಿ, ಸಂಪತ್ತು ಮಾಡದಿದ್ದರೂ ಪರ್ವಾಗಿಲ್ಲ, ಆದರೆ ನಾವು ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡುವುದನ್ನು ಮೊದಲ ಆಧ್ಯತೆಯನ್ನಾಗಿಸಬೇಕು. ಶಿಕ್ಷಣವೆ ಇಂದು ಎಲ್ಲದಕ್ಕೂ ಮೂಲ ಎನ್ನುವ ಜಾಗೃತಿಯೊಂದಿಗೆ ನಾವು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಈ ಸಮಾವೇಶ ಸ್ಪೂರ್ತಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಕ್ಫ್ ಬೋರ್ಡಿನ ಸದಸ್ಯರಾದ ಅನ್ವರ್ ಪಾಷಾ, ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿಯ ರಾಜ್ಯ ನಿರ್ದೇಶಕರಾದ ಮಹಮ್ಮದ್ ರಶೀದ್, ನಗರ ಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಾಹಿತ್ಯ, ನಾಟಕ, ಕಲಾಕ್ಷೇತ್ರದಲ್ಲಿ ಅನುಪಮ ಸೇವೆಗೈದ ಸಾಧಕರಾದ ಉಸ್ತಾದ್ ಕೆ.ಎಲ್.ಜಮಾದಾರ, ದುಂಡಪ್ಪ ಗೊಳೂರು, ಮುರ್ತುಜಾ ಹುಸೇನ್ ಆನೆಹೊಸೂರು, ಡಾ.ಭೀಮಾಶಂಕರ ಅಜನಾಳ, ನರೇಶ ನಾಯ್ಕ ಮತ್ತು ಪ್ರವೀಣಕುಮಾರ್ ಸುಲಾಖೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮ ಗುರುಗಳಾದ ಉತ್ತರ ಪ್ರದೇಶದ ಸೈಯದ್ ಜಮೀ ಆಶ್ರಫ್, ಉತ್ತರ ಪ್ರದೇಶದ ಅಲಹಾಬಾದಿನ ಗುಲಾಮ್ ರಬ್ಬಾನಿ ನಷ್ತಾರ್, ಬೆಂಗಳೂರಿನ ನಸೀರ್ ರಝಾ ಖಾನ್ ಅವರು ಭಾಗವಹಿಸಿ ಧಾಮಿಕ ಪ್ರವಚನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಮುಸ್ಲಿಂ ಸಮಾಜದ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲೆ ಮಾತ್ರವಲ್ಲದೇ ದಾರವಾಡ, ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ದಾವಣಗೆರೆ ಜಿಲ್ಲೆ ಸೇರಿದಂತೆ ಗೋವಾ ರಾಜ್ಯದಿಂದಲೂ ಸರಿ ಸುಮಾರು ಹತ್ತರಿಂದ ಹನ್ನೆರಡು ಸಾವಿರ ಜನರು ಭಾಗವಹಿಸಿದ್ದು, ಭಾಗವಹಿಸಿದ ಸರ್ವರಿಗೂ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ನೂರ್ ಇಸ್ಲಾಂ ರಿಲಿಜಿಯಸ್ ಮತ್ತು ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಇಕ್ಬಾಲ್ ಶೇಖ, ಪ್ರಮುಖರುಗಳಾದ ಗೌಸ್ ಖತೀಬ್, ನವಾಜ್ ಕರೀಮ್ ಖಾನ್, ರಾಜೇಸಾಬ ಸುಂಕದ, ಮಜೀದ್ ಸನದಿ, ಮೌಲಾಲಿ ಮುಲ್ಲಾ, ದಾದಾಪೀರ್ ನದೀಮುಲ್ಲಾ,ಇಮ್ತಿಯಾಜ್ ಅತ್ತಾರ್, ರಫೀಕ್ ಖಾನ್, ತೌಸೀಪ್ ಪಟೇಲ್, ಸರ್ಪರಾಜ್ ಮುಲ್ಲಾ, ಉಬೇದ್ ಖಾನ್, ಬಾಬುಲಾಲ್ ಪಿರ್ಜಾದೆ, ರಫೀಕ್ ಹುದ್ದಾರ, ಕರೀಮ್ ಗೌಸ್ ಖತೀಬ್, ಆರ್.ಎ.ಖಾನ್, ಜಾಫರ್ ಮಾಸನಕಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.