ಸಿದ್ದಾಪುರ: ಪಟ್ಟಣದ ಎಂಜಿಸಿ ಮಹಾವಿದ್ಯಾಲಯದಲ್ಲಿ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯ, ಬ್ಯಾಂಕ್ ಆಪ್ ಇಂಡಿಯಾ ಹಾಗೂ ಮಹಾವಿದ್ಯಾಲಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಬ್ಯಾಂಕ್ ಖಾತೆ ತೆರೆಯುವ ಶಿಬಿರ ಗುರುವಾರ ನಡೆಯಿತು.
ಪ್ರಾಚಾರ್ಯ ಪ್ರೊ.ಜಗನ್ನಾಥ ಮೊಗೇರ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ದೇವನಾಂಪ್ರಿಯ ಎಂ, ಡಾ.ಮಧುಕೇಶ್ವರ ಹೆಗಡೆ, ಡಾ.ಶ್ರೀಕಾಂತ ಭಟ್ಟ, ಸಾಗರ್ ಪಾಟೀಲ್ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಗಳಿದ್ದರು. ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಉಚಿತ ಬ್ಯಾಂಕ್ ಖಾತೆ ತೆರೆಯುವ ಕುರಿತು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಸಿದ್ದಾಪುರ ಶಾಖೆಯ ಗ್ರಾಹಕರ ಸೇವಾ ಕೇಂದ್ರದ ಸಿಬ್ಬಂದಿಗಳಾದ ವಿನಾಯಕ ಬಿ.ನಾಯ್ಕ,ಶರ್ಮಿಳಾ ನಾಯ್ಕ ಮಾಹಿತಿ ನೀಡಿದರು.೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಉಪಸ್ಥಿತರಿದ್ದರು.