ಬನವಾಸಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆರ್ಥಿಕವಾಗಿ ನಿರ್ವಹಣೆ ಕಷ್ಟಕರವಾಗಿರುವ ನಿರ್ಗತಿಕರಿಗೆ ಪ್ರತಿ ತಿಂಗಳು ನೀಡುವ 1000 ರೂ.ಗಳ ಮಾಸಾಶನವನ್ನು ಬುಧವಾರ ಸಮೀಪದ ಕಾಂತ್ರಜಿ ಗ್ರಾಮದ ಫಲಾನುಭವಿಯಾದ ಮಲ್ಲಿಕಾರ್ಜುನ ಅವರಿಗೆ ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲ್ಲೂಕು ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ಹಾಗೂ ವಲಯ ಮೇಲ್ವಿಚಾರಕ ನಾಗರಾಜ ಪಿ. ವಿತರಿಸಿದರು. ಈ ಸಂದರ್ಭದಲ್ಲಿ ಸೇವಾಪ್ರತಿನಿಧಿ ಶಿವಾಜಿ ಎಂ. ನಾಯ್ಕ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಇದ್ದರು.