Slide
Slide
Slide
previous arrow
next arrow

ಡಿ.21,22ಕ್ಕೆ ‘ಅಭಿನೇತ್ರಿ ಯಕ್ಷೋತ್ಸವ: ಯಕ್ಷಗಾನ ಪ್ರದರ್ಶನ, ಪ್ರಶಸ್ತಿ ಪ್ರದಾನ

300x250 AD

ಹೊನ್ನಾವರ: ಅಭಿನೇತ್ರಿ ಆರ್ಟ್ ಟ್ರಸ್ಟ್ ನಿಲ್ಕೋಡ್ ಇವರ ಅಭಿನೇತ್ರಿ ಯಕ್ಷೋತ್ಸವ ಡಿ.21 ಮತ್ತು 22 ರಂದು ಕವಲಕ್ಕಿಯ ಸುಬ್ರಹ್ಮಣ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಲಿದೆ ಎಂದು ಕಾರ್ಯಕ್ರಮದ ಸಂಘಟಕರಾದ ಶಂಕರ ಹೆಗಡೆ ನಿಲ್ಕೋಡ್ ತಿಳಿಸಿದರು.

ಪಟ್ಟಣದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಎರಡು ದಿನಗಳ ಕಾಲ ಯಕ್ಷಗಾನ ತಾಳಮದ್ದಳೆ, ಪ್ರಶಸ್ತಿ ಪ್ರದಾನ ಜರುಗಲಿದೆ. 7 ವರ್ಷದಲ್ಲಿ 20 ಲಕ್ಷ ಮೊತ್ತವನ್ನು ಆಸಕ್ತ ಅರ್ಹ ಕಲಾವಿದರಿಗೆ ಕಲಾಭಿಮಾನಿಗಳ ಸಹಕಾರದ ಮೇರೆಗೆ ಅಭಿನೇತ್ರಿ ಸಹಾಯಧನ ನೀಡಿದೆ. ಈ ಬಾರಿಯು ಇರ್ವರಿಗೂ ನೀಡಲಾಗುವುದು ಎಂದರು.

ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ನಾಗರಾಜ ಹೆಗಡೆ ಕಾಸ್ಕಂಡ ಮಾತನಾಡಿ ಡಿ.21 ರಂದು ಸಂಜೆ 6 ಗಂಟೆಗೆ ಅಭಿನೇತ್ರಿ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಮುಗ್ವಾ ಸುಬ್ರಹ್ಮಣ್ಯದ ಶ್ರೀ ರಾಘವೇಂದ್ರ ಭಾರತಿ ಸವೇದ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಾಗಪತಿ ಭಟ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತರಾದ ಕೇಶವ ಹೆಗಡೆ ಕೊಳಗಿ, ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಆರ್.ಟಿ.ಭಟ್, ಯಕ್ಷಗಾನ ಪ್ರೇಮಿಗಳಾದ ಎನ್.ಎಸ್.ಭಂಡಾರಿ ಪಾಲ್ಗೊಳ್ಳುವರು. ಸಭಾ ಕಾರ್ಯಕ್ರಮದ ನಂತರ “ನಳ ದಮಯಂತಿ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

300x250 AD

ಡಿ. 22ರಂದು ಮಧ್ಯಾಹ್ನ 3 ಗಂಟೆಗೆ “ಕರ್ಣಭೇದನ” ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ. ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ವೇ.ಮೂ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜರುಗಲಿದೆ. ಅಭ್ಯಾಗತರಾಗಿ ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರಾದ ಆರ್.ಜಿ.ಭಾಗ್ವತ್, ಎಸ್.ಆರ್.ಎಲ್ ಗ್ರೂಪ್ ಮಾಲಕರಾದ ವೆಂಕಟ್ರಮಣ ಹೆಗಡೆ, ಪರ್ಕಳದ ದುರ್ಗಾಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ, ಕವಲಕ್ಕಿಯ ಶ್ರೀ ಭಾರತೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಉಮೇಶ ಹೆಗಡೆ ಅಬ್ಳಿ, ಮೆಕ್ಕೆಕಟ್ಟು ಮೇಳದ ಯಜಮಾನರಾದ ರಂಜಿತ್ ಕುಮಾರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಸದಸ್ಯರು, ಕಲಾವಿದರಾದ ವಿದ್ಯಾದರ ರಾವ್ ಜಲವಳ್ಳಿ, ಕಲಾಪ್ರೇಮಿಗಳಾದ ರಾಜೇಶ ಭಂಡಾರಿ ಉಪಸ್ಥಿತರಿರುವರು.

ಪ್ರಸಕ್ತ ಸಾಲಿನ ಅಭಿನೇತ್ರಿ ಪ್ರಶಸ್ತಿಯನ್ನು ಹಿರಿಯ ಸ್ತ್ರಿವೇಷಧಾರಿಯಾದ ಶ್ರೀಧರ ಷಡಕ್ಷರಿ ಅವರಿಗೆ, “ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿ” ಯಕ್ಷಗಾನದ ಹಿರಿಯ ಹಾಸ್ಯಗಾರರಾದ ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ, “ಕಣ್ಣಿ ಪ್ರಶಸ್ತಿ” ಶ್ರೀ ಅಮೃತೇಶ್ವರಿ ಮೇಳದ ಭಾಗವತರಾದ ರಾಘವೇಂದ್ರ ಮಯ್ಯ ಇವರಿಗೆ, ಪ್ರದಾನ ಮಾಡಲಾಗುವುದು. ಮೂವರು ಸಾಧಕರಿಗೂ ಪ್ರಶಸ್ತಿ ಪತ್ರ 10 ಸಾವಿರ ನಗದು ಒಳಗಂಡಿದೆ. ಇದೇ ವೇಳೆ ಇರ್ವರು ಅಶಕ್ತ ಕಲಾವಿದರಿಗೆ ಆರ್ಥಿಕ ಸಹಕಾರ ನೀಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಶಿರಿಯಾರ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಮೇಳದ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ “ಮಹಾಕಲಿ ಮಗಧೇಂದ್ರ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಪತ್ರಿಕಾಗೊಷ್ಟಿಯಲ್ಲಿ ಉಪನ್ಯಾಸಕರಾದ ಪ್ರಶಾಂತ ಹೆಗಡೆ ಮೂಡಲಮನೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top