ಶಿರಸಿ: ನಗರದ ಟಿಎಂಎಸ್ ಸಭಾಭವನದಲ್ಲಿ ಡಿ.27ರಂದು, ಸೀತಾ ಹಾಗೂ ದಿವಂಗತ ಆರ್.ಎನ್. ಭಟ್ ಚಿತ್ರಗಿ ಹಾಗೂ ಹೇಮಾ ರಾಜಗೋಪಾಲನ್ ಮತ್ತು ಕೃತಿಕಾ ರಾಜಗೋಪಾಲನ್ ನಾಟ್ಯ ಥಿಯೇಟರ್ ಇವರ ಶಿಷ್ಯರಾದ ಕು. ಪೂರ್ಣ ಭಟ್ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮವನ್ನು ಸಾಹಿತ್ಯಗಳು, ಅಂಕಣಕರಾರೂ ಆದ ಅಶೋಕ ಹಾಸ್ಯಗಾರ ಉದ್ಘಾಟಿಸಲಿದ್ದು, ಅಭ್ಯಾಗತರಾಗಿ ಲೋಕಧ್ವನಿ ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಗಾರ ಹಾಗೂ ನಿವೃತ್ತ ಉಪನ್ಯಾಸಕ ಶಂಭು ಭಟ್ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಗೀತ ಸುಧೆ ನಡೆಯಲಿದ್ದು ಗಾಯನದಲ್ಲಿ ಯುವ ಗಾಯಕಿ ಪೃಥ್ವಿ ಹೆಗಡೆ ಬೊಮ್ನಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದು ಸಂವಾದಿನಿಯಲ್ಲಿ ಅಂಜನಾ ಹೆಗಡೆ ಶಿರಸಿ, ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ ಸಹಕರಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಗಳಲ್ಲಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.