ಹೊನ್ನಾವರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಆರೋಳ್ಳಿ ಸೈಕಲ್ ಅಂಗಡಿ ಹತ್ತಿರ ಬೊಲೆರೋ ವಾಹನ ಹೊಂಡಕ್ಕೆ ಬಿದ್ದಿರುವ ಘಟನೆ ನಡೆದಿದೆ.
ಹೆದ್ದಾರಿ ಪಕ್ಕದ ರಸ್ತೆಯ ಕೆಳಗಡೆ ಇರುವ ಮನೆಗೆ ಕಡಪ ಕಲ್ಲು ತುಂಬಿಕೊಂಡು ಇಳಿಸಲು ಹೋಗಿ ಬುಲೆರೋ ವಾಹನವನ್ನು ಹಿಮ್ಮುಖವಾಗಿ ಚಲಿಸಿ, ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ.
ಬುಲೆರೋ ವಾಹನ ತಲೆ ಕೆಳಗಾಗಿ ಬಿದ್ದಿದ್ದು ಬುಲೆರೋ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಸ್ವಲ್ಪ ಕೆಳಗೆ ಹೋದರು ಅಲ್ಲಿದ್ದ ಮನೆಯ ಅಂಗಳಕ್ಕೆ ಬಿದ್ದಲ್ಲಿ ಅಪಾಯದ ಸಾಧ್ಯತೆ ಇತ್ತು. ಕ್ರೇನ್ ಸಹಾಯದಿಂದ ಬುಲೆರೋ ಎತ್ತಲಾಗಿದೆ.