ಕುಮಟಾ: ಶಿರಸಿಯ ಪ್ರಜ್ವಲ ಟ್ರಸ್ಟ್ (ರಿ). ಹಾಗೂ ಕುಟುಂಬ ಯೋಜನಾ ಸಂಘ ಕುಮಟಾ ಇವರ ಸಹಯೋಗದಲ್ಲಿ ಡಿ.18, ಬುಧವಾರ ಬೆಳಿಗ್ಗೆ 10.30ಗಂಟೆಗೆ ಪಟ್ಟಣದ ಮಣಕಿ ಮೈದಾನ, ಕೆಎಸ್‌ಆರ್‌ಟಿಸಿ ಡಿಪೊ ಬಳಿಯ ಕುಟುಂಬಯೋಜನಾ ಸಂಘದ ಕಟ್ಟಡದಲ್ಲಿ ಕ್ಯಾನ್ಸರ್ ಭಯ ನಿವಾರಣಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಕುಟುಂಬಯೋಜನಾ ಸಂಘದ ಅಧ್ಯಕ್ಷ ಡಾ.ಅಶೋಕ ಭಟ್ ಹಳಕಾರ ಉದ್ಘಾಟಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತೆ, ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ ಕೃಷ್ಣಿ ಶಿರೂರ್ ಹುಬ್ಬಳ್ಳಿ ಇವರು ಆಗಮಿಸಲಿದ್ದಾರೆ. ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ, ಎಫ್‌ಪಿಎಐ ಶಾಖಾ ವ್ಯವಸ್ಥಾಪಕರಾದ ಸಂತಾನ್ ಲೂಯಿಸ್, ವೈದ್ಯಾಧಿಕಾರಿ ಡಾ.ಅನುರಾಧಾ ಕೆ.ಸಿ. ಉಪಸ್ಥಿತರಿರಲಿದ್ದಾರೆ.
ಅದೇ ದಿನ ಮಧ್ಯಾಹ್ನ 2.30ಕ್ಕೆ ಪ್ರಜ್ವಲ ಟ್ರಸ್ಟ್ ಶಿರಸಿ, ರೋಟರಿ ಕ್ಲಬ್ ಹೊನ್ನಾವರ, ಜಿ.ಎಸ್.ಬಿ. ಮಹಿಳಾವಾಹಿನಿ ಹೊನ್ನಾವರ, SKDRP ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರದ ಶ್ರೀರಾಮ ಮಂದಿರದ ರಘುಚಂದ್ರ ಸಭಾಗೃಹದಲ್ಲಿ ಕ್ಯಾನ್ಸರ್ ಭಯ ನಿವಾರಣಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಉದ್ಘಾಟಕರಾಗಿ ಪತ್ರಕರ್ತ ಜಿ.ಯು.ಭಟ್, ಸಂಪನ್ಮೂಲ ವ್ಯಕ್ತಿಗಳಾಗಿ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ ಕೃಷ್ಣಿ ಶಿರೂರ್ ಹುಬ್ಬಳ್ಳಿ ಆಗಮಿಸಲಿದ್ದು, ರೋಟರಿ ಕ್ಲಬ್ ಇವೆಂಟ್ ಚೇರ್‌ಮನ್ ರೋ.ಡಾ.ಪ್ರತಿಭಾ ಬಳ್ಕೂರ್, ಪ್ರಜ್ವಲ್ ಟ್ರಸ್ಟ್ (ರಿ) ಅಧ್ಯಕ್ಷೆ ಬಿಂದು ಹೆಗಡೆ ಶಿರಸಿ, ಜಿಎಸ್‌ಬಿ ಮಹಿಳಾವಾಹಿನಿ ಅಧ್ಯಕ್ಷೆ ದೀಪಾ ಕಾಮತ್, SKDRP ಯೋಜನಾಧಿಕಾರಿ ವಾಸಂತಿ ಅಮೀನ್ ಉಪಸ್ಥಿತರಿರಲಿದ್ದಾರೆ.
ಈ ಎರಡೂ ಕಾರ್ಯಾಗಾರದಲ್ಲಿ ಕ್ಯಾನ್ಸರ್, ಮನೋಪಾಸ್, ಬಿ.ಪಿ., ಶುಗರ್ ಹೀಗೆ ದಿನನಿತ್ಯ ಬಂದು ಕಾಡುವ ಹಲವಾರು ಖಾಯಿಲೆಗಳ ಬಗ್ಗೆ ಆಪ್ತ ಸಮಾಲೋಚನೆ ಹಾಗೂ ವಿಶೇಷ ರೀತಿಯ ಮುದ್ರಾ ಯೋಗ ಚಿಕಿತ್ಸಾ ವಿಧಾನಗಳನ್ನು ತಿಳಿಸಿಕೊಡಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಸಂಘಟಕರು ಕೋರಿದ್ದಾರೆ.