Slide
Slide
Slide
previous arrow
next arrow

ಅಂಬಾಗಿರಿ ವಾರ್ಷಿಕೋತ್ಸವಕ್ಕೆ ಚಾಲನೆ

300x250 AD

ಶಿರಸಿ: ನಗರದ ಅಂಬಾಗಿರಿಯ ಕಾಳಿಕಾಭವಾನಿ ದೇವಳದ ಎರಡು ದಿನಗಳ ಪ್ರತಿಷ್ಟಾಪನಾ 34ನೇ ವಾರ್ಷಿಕೋತ್ಸವದ ಉತ್ಸವವು ಶುಕ್ರವಾರ ಸಂಭ್ರಮದಿಂದ ಪ್ರಾರಂಭಗೊಂಡಿತು.

ವೇ.ಮೂ.ಕಟ್ಟೆ ಶಂಕರ ಭಟ್ಟರ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆರಂಭಗೊಂಡಿತು. ಇದರೊಂದಿಗೆ ಅವರು  ಸಿಂಹಧ್ವಜ ಆರೋಹಣ ಮಾಡಿ, ವಾರ್ಷಿಕೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ದೇವಳ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಎಮ್. ಹೆಗಡೆ ಆಲ್ಮನೆ ಇತರ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

300x250 AD

ಮಾತೆಯರಿಂದ ಕುಂಕುಮಾರ್ಚನೆ, ಕಲಶಸ್ಥಾಪನೆ ಬಲಿ, ಅಷ್ಟಾವದಾನ ಸೇವೆ ಮುಂತಾದವುಗಳು ನಡೆದವು. ನಾಳೆ ಶನಿವಾರ ಶತಚಂಡಿ ಹವನ ನಡೆಯಲಿದೆ.

Share This
300x250 AD
300x250 AD
300x250 AD
Back to top