ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಿ: 12 ಹಾಗೂ 13 ರಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ ಪೀರ್ ಟೀಮ್ ಭೇಟಿ ನೀಡಲಿದೆ. ಪೀರ್ ಟೀಮ್ನ ಅಧ್ಯಕ್ಷರಾಗಿ ಡಾ. ಸಂತನು ಕುಮಾರ್ ಸ್ವೈನ್, ಪ್ರೊಫೆಸರ್ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಬನಾರಸ್, ಡಾ. ನೀನಾ ಸೇಟ್ ಪಜ್ನಿ ಪ್ರಾಚಾರ್ಯರು ಗೋಬಿಂದ್ಘರ್ ಪಬ್ಲಿಕ್ ಕಾಲೇಜ್ ಪಂಜಾಬ್ ಹಾಗೂ ಡಾ. ವೆಂಕಟಸತ್ಯನಾರಾಯಣ ಮೂರ್ತಿ ಡೀನ್ ಶಿಕ್ಷಣನಿಕಾಯ ಎಸ್ಸಿಎಸ್ವಿಎಮ್ವಿ ವಿಶ್ವವಿದ್ಯಾಲಯ ಕಾಚಿಪುರಂ ತಮಿಳುನಾಡು ಇವರು ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರೀಕ್ಷಣೆ ನಡೆಸಿ ಮೌಲ್ಯಾಂಕನ ನೀಡುತ್ತಾರಾಗಿ ಬಾಳಿಗಾ ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರ್ ಇವರು ಹೇಳಿಕೆ ನೀಡಿರುತ್ತಾರೆ.
ಬಾಳಿಗಾ ಕಾಲೇಜಿಗೆ ನ್ಯಾಕ್ ತಂಡ ಭೇಟಿ
