ಶಿರಸಿ: ಗೋವಾದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಾರ್ಯಕ್ರಮವು ಡಿ.11, ಗೀತಾಜಯಂತಿಯಂದು ಗೋವಾಕ್ಕೆ ಆಗಮಿಸಲಿದ್ದಾರೆ. ಡಿ.12ರಂದು ಶ್ರೀಮತಿ ಹೇಮಾ ಮತ್ತು ಗಿರೀಶ ಗೋವಿಂದ ಹೆಗಡೆ ಹಾಗೂ ಬಗ್ಗೋಣ ಮನೆ ಕುಟುಂಬದವರು ಭಿಕ್ಷಾಸೇವೆಯ ಸಮರ್ಪಣೆಯನ್ನು ಮಾಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀಗಳ ಆಶೀರ್ವಚನ ಹಾಗೂ ಸಾರ್ವಜನಿಕ ಮಂತ್ರಾಕ್ಷತೆ ಕಾರ್ಯಕ್ರಮ ಇರಲಿದೆ. ಆಗಮಿಸಿದ ಎಲ್ಲರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ,
ಡಿ.13ರಂದು ಗೋವಾ ವಲಯದ ಪರವಾಗಿ ಜಯರಾಮ ಭಟ್ಟ ದಂಪತಿಗಳು ಭಿಕ್ಷಾಸೇವೆಯ ಸಮರ್ಪಣೆಯನ್ನು ಮಾಡಲಿದ್ದು, ಆದಿನ ಆಶೀರ್ವಚನ ಹಾಗೂ ಮಂತ್ರಾಕ್ಷತೆ ಇರುವುದಿಲ್ಲ. ಮಹಾಪ್ರಸಾದದ ವ್ಯವಸ್ಥೆ ಇದೆ ಎಂದು ತಿಳಿಸಲಾಗಿದೆ.
ಎರಡೂ ದಿನದ ಕಾರ್ಯಕ್ರಮಗಳು ಗಿರೀಶ ಹೆಗಡೆಯವರ, ಶ್ರೀಸಮಷ್ಟಿ, ಸಬಾಸ್ಟಿಯನ್ ಚಾಪೆಲ್ ಸಮೀಪ, ನಾವೆಲಿ, ಮಡಗಾಂವ್ ಇಲ್ಲಿ ನಡೆಯಲಿದೆ.
ಗೋವಾದಲ್ಲಿರುವ ಸಮಸ್ತ ಹವ್ಯಕರು ಹಾಗೂ ಮಠದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಗೋವಾ ವಲಯದ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.