ಶಿರಸಿ: ತಾಲೂಕಿನ ಉಂಚಳ್ಳಿ ವ್ಯಾಪ್ತಿಯಲ್ಲಿ ಸುರಿದ ಮಳೆಯು ರೈತರನ್ನು ಚಿಂತಾಕ್ರಾಂತರನ್ನಾಗಿ ಮಾಡಿದ್ದು ಗದ್ದೆಯಲ್ಲಿ ಕಟಾವು ಮಾಡಿದ ಭತ್ತವೆಲ್ಲಾ ನೀರಿನಲ್ಲಿ ಮುಳುಗಿ ಮೊಳಕೆ ಒಡೆಯುವ ಹಂತಕ್ಕೆ ಬಂದು ತಲುಪಿದೆ. ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಕಾಣುತ್ತಿತ್ತು.ಆದರೆ ಅದೇ ಮಳೆ ಕಟಾವು ಮಾಡಿದ ಸಂದರ್ಭದಲ್ಲಿ ಬಂದಿದ್ದರಿಂದ ರೈತರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ. ಇದನ್ನರಿತ ಉಂಚಳ್ಳಿ ಸೊಸೈಟಿಯ ರೈತರ ಸಂಕಷ್ಟದ ಬಗ್ಗೆ ಕಾಳಜಿಯುಳ್ಳ ಸೇವಾ ಮನೋಭಾವನೆಯ ನಿರ್ದೇಶಕರಾದ ಸೋಮೇಶ್ವರ ಚೆನ್ನ ಗೌಡ ಕಬ್ಬೆ ಇವರು ಸ್ವತಃ ರೈತರ ತೋಟ ಗದ್ದೆಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಘನ ಸರಕಾರಕ್ಕೆ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ. ರೈತರಿಗೆ ಆದ ನಷ್ಟಕ್ಕೆ ಪರಿಹಾರ ತಕ್ಷಣಕ್ಕೆ ನೀಡಬೇಕೆಂದು ಉಂಚಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಮುಖ್ಯ ಕಾರ್ಯ ನಿರ್ವಾಹಕರು ಸರ್ವ ಕಮಿಟಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಸರಕಾರಕ್ಕೆ ಆಗ್ರಹಿಸಿದ್ದಾರೆ.