Slide
Slide
Slide
previous arrow
next arrow

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ: ಅರ್ಜಿ ಆಹ್ವಾನ

300x250 AD

ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2024-25 ನೇ ಸಾಲಿಗೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ (ಎನ್.ಸಿ.ಟಿ.ಇ ಯಿಂದ ಮಾನ್ಯತೆ ಪಡೆದಿರುವ) ಕೋರ್ಸ್ನಲ್ಲಿ ವ್ಯಾಸಂಗ ಮಾಡುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯ (ಮುಸ್ಲಿಂ, ಕ್ರೀಶ್ಚಿಯನ್, ಜೈನ್ ಭೌದ್ಧ, ಪಾರ್ಸಿ, ಸಿಖ್) ವಿದ್ಯಾರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆರ್ಥಿಕ ವರ್ಷದ ಅನುದಾನಕ್ಕೆ ಅನುಗುಣವಾಗಿ, ಕೋರ್ಸುಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷ ರೂ 25,000 ವಿಶೇಷ ಪ್ರೋತ್ಸಾಹ ಧನ ಗರಿಷ್ಠ 2 ವರ್ಷ ನೀಡಲಾಗುವುದು ಅರ್ಜಿಯನ್ನು ಸಲ್ಲಿಸುವ ಬಯಸುವ ವಿದ್ಯಾರ್ಥಿಗಳ ಪಾಲಕರ ವಾರ್ಷಿಕ 6 ಲಕ್ಷ ಮೀರಿರಬಾರದು. ಮತ್ತು ವಿದ್ಯಾರ್ಥಿಗಳ ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇ.50 ರಷ್ಟು ಅಂಕ ಗಳಿಸಿರಬೇಕು, ಕಡ್ಡಾಯವಾಗಿ ಸೇವಾಸಿಂಧು ವೆಬ್‌ಸೈಟ್ ನಲ್ಲಿ ಡಿ.25 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್: https://sevasindhu.karnataka.gov.in/ ಅಥವಾ ತಮ್ಮ ತಾಲೂಕಿನ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ, ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉತ್ತರ ಕನ್ನಡ, ಕಾರವಾರ ದೂರವಾಣಿ ಸಂಖ್ಯೆTel:+9108382220336 ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಯಹಾಯವಾಣಿ:Tel:+918277799990 ನ್ನು ಸಂಪರ್ಕಿಸುವAತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top