ಯಲ್ಲಾಪುರ: ತಾಲೂಕಿನ ಚಿಪಗೇರಿ-ಉಚಗೇರಿ-ಜಕ್ಕೊಳ್ಳಿ ಕ್ಷೇತ್ರಪಾಲ ಕದಳಿ ನಂದಿಕೇಶ್ವರ ದೇವಸ್ಥಾನದಲ್ಲಿ ಚಂಪಾಷಷ್ಠಿ ಪ್ರಯುಕ್ತ ಏಕಾದಶ ರುದ್ರ, ಕಾರ್ತಿಕೋತ್ಸವ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಸುತ್ತಮುತ್ತಲಿನ ನೂರಾರು ಭಕ್ತರು ಪೂಜೆ ಸಲ್ಲಿಸಿ ಕೃತಾರ್ಥರಾದರು. ಸ್ಥಳೀಯ ಕಲಾವಿದರ ಡೊಳ್ಳುಕುಣಿತ, ಪಟಾಕಿ ಪ್ರದರ್ಶನ ನೆರೆದಿದ್ದ ಭಕ್ತರ ಮನಸೂರೆಗೊಂಡಿತು.
ಕದಳಿ ನಂದಿಕೇಶ್ವರ ಕಾರ್ತಿಕೋತ್ಸವ ಸಂಪನ್ನ
