ಅಶ್ವಿನಿ ನಕ್ಷತ್ರ ಮೊದಲನೇ ಪಾದದಲ್ಲಿ ಜನಿಸಿದವರು ಹೇಳಿಕೊಳ್ಳಬೇಕಾದ ಶ್ಲೋಕ
“ವಿಶ್ವಂ ವಿಷ್ಣುರ್ವಷಟ್ಕಾರಃ ಭೂತಭವ್ಯಭವತ್ಪ್ರಭುಃ| ಭೂತಕೃಧ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ”
ಭಾವಾರ್ಥ:- ಈ ವಿಶ್ವವು “ಅವನಿಂದಲೇ”ಸೃಷ್ಠಿಯಾಗಿ ಅವನಲ್ಲೇ (ವಿಷ್ಣು) ಇದ್ದು ಅವನಲ್ಲೇ ಮತ್ತೆ ಲಯವಾಗುವದರಿಂದ ಅವನಿಗೆ ” ವಿಶ್ವ”ಎಂಬ ನಾಮ(ಹೆಸರು). ಇಲ್ಲಿರುವ ಚರಾಚರ ವಸ್ತುಗಳೆಲ್ಲವನ್ನೂ ವ್ಯಾಪಿಸುವದರಿಂದ ಭಗವಂತನಿಗೆ “ವಿಷ್ಣ”ವೆಂದು ಹೆಸರು. ಹೋಮ ಹವನಗಳಲ್ಲಿ ‘ವಷಟ್’ ಮಂತ್ರಗಳಿಂದ ಭಗವಂತನಿಗೆ ಹವಿಸ್ಸನ್ನು ಹಾಕುತ್ತಾರೆ. ಆದ್ದರಿಂದ ಅವನಿಗೆ ಈ ಹೆಸರು. ಹಿಂದೆ(ಭೂತ) ಭವ್ಯ (ಈಗ ) ಭವತ್ (ಮುಂದೆ) ಎಂಬ ಮೂರೂ ಕಾಲಕ್ಕೂ ಒಡೆಯನಾಗಿದ್ದರಿಂದ ‘ಭೂತ ಭವ್ಯ ಭವತ್ಪ್ರಭುಃ ‘ಎಂದು ಅವನಿಗೆ (ವಿಷ್ಣು) ಕರೆಯಲಾಗಿದೆ. ಎಲ್ಲಾ ಜೀವಿಗಳನ್ನು ಸೃಷ್ಟಿಸುತ್ತಾನೆ. ಅಂತ್ಯ ಕಾಲದಲ್ಲಿ ಆ ಜೀವಿಗಳನ್ನು ಕೊಲ್ಲುವವನೂ ಅವನೇ. ಆದುದರಿಂದ ಅವನು ‘ಭೂತಕೃತ್’ ಎಂದು ಕರೆಯಲ್ಪಡುತ್ತಾನೆ. ಎಲ್ಲಾ ಪ್ರಾಣಿಗಳನ್ನು ಧಾರಣೆ, ಪೋಷಣೆ, ಪಾಲನೆಯನ್ನು ಮಾಡುತ್ತಾ ಬಾಹ್ಯದಲ್ಲಿ ಯೋಗ್ಯ ಗಾಳಿ, ಮಳೆ,ಬೆಳೆ ಉಂಟು ಮಾಡುವ ಮೂಲಕ ಹಾಗೂ ಒಳಗೆ ಪ್ರಾಣಾಪಾನಾದಿ ಕ್ರಿಯೆಗಳ ಮೂಲಕ ಮಾಡುವವನು ಆತನೇ. ಆದ್ದರಿಂದ ‘ಭೂತಬೃತ್’.ಜಗತ್ತಿನ ಎಲ್ಲಾ ಚರಾಚರ ವಸ್ತುಗಳಲ್ಲಿ ಕೇವಲ ಇರುವಿಕೆಯ ರೂಪದಲ್ಲಿ ಅವನು ಇರುತ್ತಾನೆ. ಆದ್ದರಿಂದ ಪರಮಾತ್ಮನಿಗೆ ‘ಭಾವ ‘ಎಂಬ ಹೆಸರು.ಎಲ್ಲ ಜೀವಿಗಳಲ್ಲಿಯೂ’ನಾನು’ ಎಂಬ ಆತ್ಮನಾಗಿರುವವನು.ಎಲ್ಲ ಜೀವಂತ ವಸ್ತುಗಳು ಅವನಿಂದಲೇ ಜೀವಪಡೆದುದರಿಂದ ‘ಭೂತಾತ್ಮಾ’ ಎನಿಸಿದ್ದಾನೆ. ಎಲ್ಲರನ್ನೂ ಸೃಷ್ಟಿಸಿ ಅವು ವರ್ಧಿ ಸುವಂತೆ ಮಾಡುತ್ತಾನೆ. ಅದುದರಿಂದ ‘ಭೂತ ಭಾವನ’ ಎನಿಸಿದ್ದಾನೆ.
(ಸಂಗ್ರಹ:-ಡಾ.ಚಂದ್ರಶೇಖರ. ಎಲ್. ಭಟ್. ಬಳ್ಳಾರಿ.)