ಯಲ್ಲಾಪುರ: ತಾಲೂಕಿನ ಕಳಚೆಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಶಾರದಾ ಉತ್ಸವದ ಸಮಾರೋಪ ಸಮಾರಂಭ ಶನಿವಾರ ಸಂಜೆ ನಡೆಯಿತು.
ಯಕ್ಷಗಾನ ಕಲಾವಿದ ಅನಂತ ಗದ್ದೆ ದಂಪತಿಯನ್ನು ಸನ್ಮಾನಿಸಲಾಯಿತು. ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ, ಸಂಕಲ್ಪ ಸಂಸ್ಥೆ ಸಂಚಾಲಕ ಪ್ರಸಾದ ಹೆಗಡೆ ಪ್ರಮುಖರಾದ ಜಿ.ಎಸ್.ಭಟ್ಟ, ರಾಘವೇಂದ್ರ ಹೆಗಡೆ ಮುಂತಾದವರಿದ್ದರು.
ಶಾರದಾ ಉತ್ಸವ ಸಂಪನ್ನ
