ಸಿದ್ದಾಪುರ: ಕೆಚ್ಚೆದೆಯ ಯೋಧನಾಗಿ 17 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ನಿವೃತ್ತರಾದ ಪಟ್ಟಣದ ಕೊಂಡ್ಲಿಯ ನೀಲಕಂಠ ನಾಯ್ಕ ಅವರಿಗೆ ಸಿದ್ದಾಪುರದ ಜನತೆ ಅಭೂತಪೂರ್ವ ಸ್ವಾಗತ ನೀಡಿ ಬರಮಾಡಿಕೊಂಡರು.
ಭಾರತೀಯ ಸೈನ್ಯಕ್ಕೆ ಸೇರ್ಪಡೆಯಾಗಿ 2007ರಲ್ಲಿ ಸೇವೆಗೆ ಸೇರಿದ ನೀಲಕಂಠ ನಾಯ್ಕ ಪಂಜಾಬ್, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಜಮ್ಮು & ಕಾಶ್ಮಿರ, ಸಿಕ್ಕಿ ಹಾಗೂ ಪಂಜಾಬ್ನಲ್ಲಿ ದೇಶದ ಗಡಿ ಕಾಯ್ದ ಭಾರತಾಂಬೆಯ ಹೆಮ್ಮೆಯ ಸುಪುತ್ರ ನೀಲಕಂಠ ನಾಯ್ಕ ಲ್ಯಾನ್ಸ್ ನಾಯಕನಾಗಿ ನಿವೃತ್ತರಾಗಿದ್ದಾರೆ.
‘ಅದ್ದೂರಿ ಸ್ವಾಗತ‘:
ಭಾರತೀಯ ಸೈನ್ಯದಲ್ಲಿ 17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಾದ ಸಿದ್ದಾಪುರಕ್ಕೆ ಆಗಮಿಸಿದ ನೀಲಕಂಠ ನಾಯ್ಕ ಅವರಿಗೆ ಸಿದ್ದಾಪುರದ ಜನತೆ ಅಭೂತಪೂರ್ವ ಸ್ವಾಗತ ನೀಡಿದರು. ಪಟ್ಟಣದ ಗಾರ್ಡನ್ ಸರ್ಕಲ್ ಬಳಿ ಬರಮಾಡಿಕೊಂಡು ತೆರೆದ ವಾಹನದಲ್ಲಿ ಚಂದ್ರಗುತ್ತಿ ಸರ್ಕಲ್, ಬಸ್ ನಿಲ್ದಾಣ ಸರ್ಕಲ್, ರಾಜಮಾರ್ಗ, ಸೊರಬಾ ರಸ್ತೆ ಮೂಲಕ ಮೆರವಣಿಗೆ ನಡೆಸಿ ನಿವೃತ್ತ ಯೋಧನನ್ನು ಬರಮಾಡಿಕೊಂಡರು.