Slide
Slide
Slide
previous arrow
next arrow

ಕೈಗಾರಿಕೆ ಸ್ಥಾಪನೆಗಾಗಿ ಜಮೀನು ಮಂಜೂರು: ಠರಾವು ರದ್ದುಗೊಳಿಸಲು ಆಗ್ರಹ

300x250 AD

ಸಿದ್ದಾಪುರ : ಮಳಲವಳ್ಳಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಜಮೀನುಗಳ  ಮಂಜೂರು ಮಾಡಿದ ಠರಾವನ್ನ ರದ್ದುಪಡಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಮನ್ಮನೆ  ಗ್ರಾಮ ಪಂಚಾಯತ ಕಾರ್ಯಾಲಯದ ಎದುರು ಧರಣಿ ನಡೆಸಿದರು.

ಮನ್ಮನೆ ಗ್ರಾಮದ  ಗ್ರಾಮ ಸುಧಾರಣಾ ಕಮಿಟಿ ಅಧ್ಯಕ್ಷ  ವೆಂಕಟೇಶ ಹನುಮಾ ನಾಯ್ಕ ಮಳಲವಳ್ಳಿ ಮಾತನಾಡಿ  ಖಾಸಗಿ ಕಂಪನಿಗಳು ನಮ್ಮೂರಿಗೆ ಬಂದು ನಮ್ಮೂರಿನ ಗೋಮಾಳ ಜಾಗದಲ್ಲಿ ಖಾಸಗಿ ಕಂಪನಿಗಳು ಆ ಜಾಗ ತಮಗೆ ಬೇಕು ಎಂದು ಪಂಚಾಯಿತಿಯ ಠರಾವು ಮಾಡಿಸಿ ಕೆಲಸವನ್ನು ಪ್ರಾರಂಭಿಸಿದ್ದಾರೆ. ಅದು ಫಲವತ್ತಾದ ಜಾಗ. ಅಲ್ಲಿ ಕೈಗಾರಿಕಾ ಕಟ್ಟಡಗಳನ್ನು ಕಟ್ಟುವುದು ಸೂಕ್ತವಲ್ಲ 

ಜಾನುವಾರುಗಳ ಮೇವಿಗಾಗಿ ಆ ಜಾಗವನ್ನು ನಾವು ರಕ್ಷಿಸಿಕೊಂಡು ಬಂದಿದ್ದೇವೆ. ಇಲ್ಲಿ ಬಿಸಿಲಿನಲ್ಲಿ ಪ್ರತಿಭಟನೆಗೆ ಬಂದು ಕುಳಿತಿರುವ ಹೆಣ್ಣು ಮಕ್ಕಳನ್ನು ನೋಡಿದರೆ ಎಷ್ಟು ವಿರೋಧವಿದೆ ಎಂದು ತಮಗೆ ಅರ್ಥವಾಗುತ್ತದೆ. ಇದು ಸಣ್ಣ ವಿಚಾರ ಮನಸ್ಸು ಮಾಡಿದರೆ ಇದನ್ನು ತಡೆಯಬಹುದು. ಇದನ್ನು ಪುನರ್ ಪರಿಶೀಲಿಸುವ ಹಕ್ಕು ಮಾನ್ಯ ಜಿಲ್ಲಾಧಿಕಾರಿಗಳಿಗೆ ಇದೆ.

ನಮ್ಮ ಶಾಸಕರಾದ ಭೀಮಣ್ಣ ನಾಯ್ಕ್ ರವರಲ್ಲಿ   ಸಮಸ್ಯೆ ಬಗೆಹರಿಸುವ ಕುರಿತು ಡಿಸಿ ರವರನ್ನು ಸ್ಥಳಕ್ಕೆ ಕರೆಯಿಸಿ ಎಂದು ಈ ಹಿಂದೆ ಹೇಳಿದ್ದೆವು. ಆದರೆ ಭೀಮಣ್ಣ ನಾಯ್ಕರು ಹಾರಿಕೆ ಉತ್ತರ ನೀಡಿ ನುಣುಚಿ  ಕೊಂಡಿದ್ದಾರೆ. ಸರಕಾರ ಈ ಆದೇಶ ಕೈ ಬಿಡದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಾ ದಂಡಾಧಿಕಾರಿ ಸಿದ್ದಾಪುರ ಕಛೇರಿಯ ಆವರಣದಲ್ಲಿ ಗ್ರಾಮದ ಜನ – ದನಕರು ಜಾನುವಾರು ಗಳೊಂದಿಗೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದರು.

300x250 AD

ಪ್ರಮುಖ ಕೃಷ್ಣ ಬರ್ಮಾ ನಾಯ್ಕ್, ಗೋಪಾಲ ವಿ. ನಾಯ್ಕ ಮಾತನಾಡಿ ನಮ್ಮ ಸಮಸ್ಯೆ ಹರಿಯದೆ ಇದ್ದಲ್ಲಿ ಸರಿಯಾದ ಸ್ಪಂದನೆ ಸಿಗದೇ ಇದ್ದಲಿ ಮಳವಳ್ಳಿ ಗ್ರಾಮದ ಮುಖಾಂತರ ಪಾದಯಾತ್ರೆಯಲ್ಲಿ ಬಂದು ತಹಶೀಲ್ದಾರ್ ಕಚೇರಿಗೆ ಮನವಿ ನೀಡಲಿದ್ದೇವೆ ನ್ಯಾಯ ಸಿಗದಿದ್ದರೆ  ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ, ಅದಕ್ಕೂ ಮುಂದುವರೆದು ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ವಿಧಾನಸೌಧಕ್ಕೂ ಕೂಡ ಮುತ್ತಿಗೆ ಹಾಕಲಿದ್ದೇವೆ, ನಾವು ರೈತರು ಹೀಗೆ ಕೈ ಕಟ್ಟಿ ಕುಳಿತರೆ ಎಲ್ಲರೂ ನಮ್ಮ ಮೇಲೆ ದರ್ಬಾರ್ ಮಾಡುತ್ತಾರೆ. ಜನಪ್ರತಿನಿಧಿಗಳು ಯಾವ ಕಡೆ ಸಂಖ್ಯಾಬಲ ಹೆಚ್ಚಾಗಿದೆಯೋ ಆ ಕಡೆ ತಮ್ಮ ಒಲವು ತೋರಿಸುತ್ತಾರೆ. ಯಾರು ಕಡಿಮೆ ಸಂಖ್ಯೆಯಲ್ಲಿರುವ ಕಡೆ ಸಪೋರ್ಟ್ ಮಾಡಲು ಬರುವುದಿಲ್ಲ,

ಸರ್ಕಾರಗಳು ಬದಲಾದಾಗ ಹಲವಾರು ಯೋಜನೆಗಳು, ಸ್ಥಳಗಳು ಬದಲಾವಣೆಯಾಗುತ್ತದೆ, ಇದನ್ನು ಸಹ ಹಾಗೆ ಮಾಡಬಹುದಲ್ಲ. ಈ ಯೋಜನೆ ಹಿಂದಿನ ಸರ್ಕಾರವಿದ್ದಾಗ ಆಗಿದ್ದು. ಬರುಡು ಜಾಗದಲ್ಲಿ ಇದ್ದರೆ ಮಾಡಬಹುದಾಗಿತ್ತು ಆದರೆ ಇದು ಫಲವತ್ತಾದ ಭೂಮಿ ಇಲ್ಲಿ 981 ಜಾನುವಾರುಗಳ ಮೇವಿಗಾಗಿ ಗ್ರಾಮಸ್ಥರು ಕಾಯ್ದಿಟ್ಟುಕೊಂಡಿರುವ ಸ್ಥಳವಾಗಿದೆ. ನಮ್ಮ ಗ್ರಾಮದಲ್ಲಿ ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ 10 ಜಾನುವಾರುಗಳಿವೆ. ಹಾಗಾದರೆ ನೂರು ಮನೆಗಳಿಗೆ ಎಷ್ಟು ಜಾನುವಾರುಗಳು ಆದವು? ಆದ್ದರಿಂದ ಈ ಫಲವತ್ತಾದ ಭೂಮಿಯನ್ನು ಜಾನುವಾರುಗಳ ಮೇವಿಗಾಗಿ ಬಿಟ್ಟುಕೊಡಬೇಕು . ಈಗ ಹಾಗೂ ಮುಂದೆ ಕೂಡ ನಾವು ಜಾನುವಾರುಗಳಿಗಾಗಿ ಹೋರಾಟ ಮಾಡುತ್ತೇವೆ ಎಂದರು.

 ಉಪತಾಶಿಲ್ದಾರ್ ಡಿಎಂ ನಾಯ್ಕ ರವರ ಮೂಲಕ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ನೂರಾರು ಜನರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top