Slide
Slide
Slide
previous arrow
next arrow

‘ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಮಾವೇಶ’ ಯಶಸ್ವಿ

300x250 AD

ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಹೊನ್ನಾವರ ಮತ್ತು ಭಟ್ಕಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಧರ್ಮಸ್ಥಳ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಉತ್ತರ ಕನ್ನಡ, ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ. ಹೇಮಾವತಿ ವೀರೇಂದ್ರ ಹೆಗ್ಗಡೆರವರ ಮಾರ್ಗದರ್ಶನದೊಂದಿಗೆ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ “ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಮಾವೇಶ” ಕಾರ್ಯಕ್ರಮವು ತಾಲೂಕಿನ ಮಂಕಿಯ ಕೊಕ್ಕೇಶ್ವರ ರಾಮ ಕ್ಷತ್ರೀಯ ಸಭಾಭವನದಲ್ಲಿ ನೆರವೇರಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಮಂಕಿ ಠಾಣಾ ಪಿಎಸ್ಐ ಶ್ರೀಕಾಂತ ರಾಥೋಡ್‌ ನೆರವೇರಿಸಿ, ಮಾತನಾಡಿ ಇಂದಿನ ಸಮಾಜದಲ್ಲಿ ವ್ಯಸನ ಮುಕ್ತರಾಗಲು ಎಲ್ಲರೂ ದೃಢ ಸಂಕಲ್ಪ ಮಾಡಬೇಕು. ಭೂಮಿಯಲ್ಲಿ ಬೆಳೆಯುವ ನಶೆ ಪದಾರ್ಥಗಳನ್ನು ಸ್ವೀಕರಿಸುವ ಮುನ್ನ ಅದರ ಬಗ್ಗೆ ಯೋಚಿಸಬೇಕು. ಅದನ್ನು ಮಾರಾಟ ಮಾಡುವವರಿಗೆ ಕಾನೂನು ರೀತಿಯಲ್ಲಿ ಏನೆಲ್ಲ ಶಿಕ್ಷೆ ಇದೆ ಎಂಬುವುದನ್ನು ತಿಳಿಸಿದರು. ಒಂದು ಉತ್ತಮವಾದ ಸಮಾಜ ನಿರ್ಮಾಣ ಆಗಬೇಕಾದರೆ ಈ ನಶೆ ಪದಾರ್ಥದಿಂದ ದೂರ ಇರಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಸನಕ್ಕೆ ಒಳಗಾಗುತ್ತಿದ್ದು, ಶಾಲಾ ಕಾಲೇಜು ಆವರಣದಲ್ಲಿ 100 ಮೀಟರ್‌ ಅಂತರದಲ್ಲಿ ತಂಬಾಕು ನಿಷೇಧಗೊಳಿಸಿದೆ. ಹಾಗೆಯೇ ವಿದ್ಯಾರ್ಥಿಗಳು ವೈಟ್‌ ನಾರ್‌ ಬಳಕೆಯಿಂದ ಅಮಲು ಸೇವನೆಗೆ ಮುಂದಾಗುತ್ತಿದ್ದು, ಇದರಿಂದ ದೂರ ಇರಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಸಂದರ್ಭದಲ್ಲಿ ನವಜೀವನ ಸಮಿತಿಯ ಸದಸ್ಯರ ಅನಿಸಿಕೆ ವಸಂತ ಮೊಗೆರ್‌ ರವರು ವ್ಯಕ್ತಪಡಿಸಿದರು. ನೆರೆದ ಗಣ್ಯರು ಗಾಂಧಿ ಫೋಟೋಕ್ಕೆ ಹೂವನ್ನು ಅರ್ಪಿಸುವುದರ ಮೂಲಕ ಗಾಂಧಿ ನಮನ ಮಾಡಲಾಯಿತು. ವೇದಿಕೆ ಮೇಲಿರುವ ಗಣ್ಯರಿಂದ ಪಾನಮುಕ್ತರಿಗೆ ಅಭಿನಂದನೆ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ (ರಿ) ಉತ್ತರ ಕನ್ನಡ ಜಿಲ್ಲೆ ನಿರ್ದೇಶಕ ಮಹೇಶ್‌ ಎಂ. ಡಿ. ಮಾತನಾಡಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯಿಂದ ತಾಲೂಕು ಮಟ್ಟದ ಕಾರ್ಯಕ್ರಮದ ಕುರಿತು ಸಂಘ ಬೇರೆ ಬೇರೆ ಅಂಗ ಇದರ ಒಂದರಲ್ಲಿ 01 ಪ್ರಗತಿನಿಧಿ ಕಾರ್ಯಕ್ರಮ ಅದರಲ್ಲಿ ಮುಖ್ಯವಾಗಿ ಪ್ರೀತಿಸುವ ಮುಖ್ಯ ಕಾರ್ಯಕ್ರಮ ಜನಜಾಗೃತಿ. ಬಡವರ ಕಣ್ಣೀರು ವರಿಸುವ ಕಾರ್ಯಕ್ರಮ. ಮನೆ ಮನೆ ತಾಳಿ ಉಳಿಸುವ ಕಾರ್ಯಕ್ರಮ ಎಂದು ತಿಳಿಸಿದರು. ಯೋಜನೆಯ ಬೇರೆ ಬೇರೆ ರೀತಿಯ ಕಾರ್ಯಕ್ರಮದ ಬಗ್ಗೆ ತಿಳಿಸಿದರು. 33 ವರ್ಷದ ಹಿಂದೆ ಜನ ಜಾಗೃತಿ ವೇದಿಕೆ ಬೆಳ್ತಂಗಡಿ ಪ್ರಥಮವಾಗಿ ಆರಂಭವಾಗಿ ಮೂಲ ಉದ್ದೇಶ ದುಷ್ಟ ವಿರುದ್ಧ ಹೋರಾಟ ಮಾಡುವುದು. ಉಜಿರೆಯಲ್ಲಿ ವ್ಯಸನ ಮುಕ್ತ ಕೇಂದ್ರದ ಕುರಿತು ಮಾಹಿತಿ ನೀಡಿದರು. ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮಾಡುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ದುಶ್ಚಟದಿಂದ ಬಲಿಯಾಗದಂತೆ ಮಾಹಿತಿ ನೀಡಲಾಗಿದೆ. ಗ್ರಾಮ ಪ್ರತೀ ಯೋಜನೆಯ ಮೂಲ ಪರಿಕಲ್ಪನೆ ಕುರಿತು ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿರುವ ರಾಜು ನಾಯಕ ರವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸರಿಸುಮಾರು 1,60,000 ಕ್ಕಿಂತಲೂ ಹೆಚ್ಚಿನ ಜನರನ್ನು ವ್ಯಸನ ಮುಕ್ತಮಾಡಿಸಿದ್ದಾರೆ. ಎಂದು ಅಭಿಪ್ರಾಯ ತಿಳಿಸಿದರು. ಮಹಿಳೆಯರ ಶಕ್ತಿ ಏನೆಂದು ತೋರಿಸಿದೆ ಶ್ರೀ ಕ್ಷೇತ್ರ ಧಮರ್ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ತಿಳಿಸಿದರು.

300x250 AD

ಇದೇ ಸಂದರ್ಭದಲ್ಲಿ ಪ್ರತೀ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷರಾದ ಸತೀಶ್‌ ಶೇಟ್‌ ಮಾತನಾಡಿ ಗ್ರಾಮ ಪ್ರತೀ ಯೋಜನೆಯ ಸೇವಾ ಕಾರ್ಯದ ಕುರಿತು ಶ್ಲಾಘಿಸಿದರು.

ಈ ಕಾರ್ಯಕ್ರಮವನ್ನು ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲ ಗಣ್ಯರನ್ನು ಭಟ್ಕಳ ಯೋಜನಾ ವ್ಯಾಪ್ತಿಯ ಕ್ಷೇತ್ರ ಯೋಜನಾಧಿಕಾರಿಗಳಾದ ಗಣೇಶ್‌ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಡೆದ ಕುಣಿತ ಭಜನೆ ಎಲ್ಲ ಜನರನ್ನು ಮನ ಸೆಳೆಯಿತು. ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನೋದ ನಾಯ್ಕ ನಿರೂಪಿಸಿದರೆ ಹೊನ್ನಾವರ ಯೋಜನೆ ವ್ಯಾಪ್ತಿಯ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀಮತಿ ವಾಸಂತಿ ಅಮೀನ್‌ ವಂದಿಸಿದರು.

Share This
300x250 AD
300x250 AD
300x250 AD
Back to top