ಸಿದ್ದಾಪುರ; ತಾಲೂಕಿನ ನೇಗಾರಿನ ಸ್ವಾತಂತ್ರ್ಯ ಯೋಧರಾಗಿದ್ದ ದಿ.ರಾಮಕೃಷ್ಣ ಹೆಗಡೆ ಅವರ ಧರ್ಮಪತ್ನಿ ಮಹಾದೇವಿ ಹೆಗಡೆ (103) ರವಿವಾರ (29-9-2024) ನಿಧನರಾಗಿದ್ದಾರೆ. ಇಟಗಿ ಭಟ್ರಕೇರಿ ವೈದಿಕ ಮನೆತನದವರಾಗಿದ್ದ ಮಹಾದೇವಿ ಅವರನ್ನು ನೇಗಾರಿನ ಪೊಲೀಸ್ ಪಟೇಲರೂ ಆಗಿದ್ದ ರಾಮಕೃಷ್ಣ ಹೆಗಡೆ ಲಗ್ನವಾಗಿದ್ದರು. ತಮ್ಮ ಪಟೇಲಿಕೆಗೆ ರಾಜೀನಾಮೆ ನೀಡಿ ಚಲೇಜಾವ್ ಚಳವಳಿಯಲ್ಲಿ ಪಾಲ್ಗೊಂಡಿದ್ದ ರಾಮಕೃಷ್ಣ ಹೆಗಡೆಯವರ ಹೋರಾಟಕ್ಕೆ ಮಹಾದೇವಿ ಹೆಗಡೆ ಬೆಂಬಲಿಸಿದ್ದರು. ಮೃತರು ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.