Slide
Slide
Slide
previous arrow
next arrow

ಮರಡೂರ ಗಾನಸುಧೆಯಲ್ಲಿ ಮಿಂದೆದ್ದ ಅಭಿಮಾನಿಗಳು

300x250 AD

ಸಂಗೀತ ರಸದೌತಣ ಬಡಿಸಿದ ಜನನಿ ಖಯಾಲ್ ಉತ್ಸವ

ಶಿರಸಿ: ಇಲ್ಲಿಯ ಜನನಿ ಮ್ಯೂಸಿಕ್ ಸಂಸ್ಥೆ ಹೊಟೇಲ್ ಸುಪ್ರಿಯಾ ಸಭಾಭವನದಲ್ಲಿ ಆಯೋಜಿಸಿದ್ದ ಖಯಾಲ್ ಉತ್ಸವದ 2ನೇ ದಿನದಂಗವಾಗಿ ನಡೆದ ಖ್ಯಾತ ಗಾಯಕ ಪಂ. ಕುಮಾರ ಮರಡೂರರವರ ಗಾನಸುಧೆ ಸಂಗೀತಾಭಿಮಾನಿಗಳಿಗೆ ವೈವಿಧ್ಯಮಯವಾಗಿ ಶಾಸ್ತ್ರೀಯ ರಸದೂಟ ನೀಡುವಲ್ಲಿ ಯಶಸ್ವಿಯಾಗಿದೆ.

ಮರಡೂರರವರು ತಮ್ಮ ಸಂಗೀತ ಕಚೇರಿಯಲ್ಲಿ ಆರಂಭಿಕವಾಗಿ ರಾಗ್ ಮಿಯಾಮಲ್ಲಾರದಲ್ಲಿ ಆರಂಭಗೊಳಿಸಿ ಎರಡುವರೆ ತಾಸುಗಳಿಗೂ ಮಿಕ್ಕಿ ಹಾಡಿ ಪ್ರೇಕ್ಷಕರ ಕರತಾಡನಗಳಿಗೆ ಭಾಜನರಾದರು. ರಾಗ್ ದೇಶ್ ಮಿಶ್ರವಾಗಿ ಹಾಡುತ್ತಾ ತುಮರಿ ಹಾಡಿದರು. ನಂತರ ಕೋರಿಕೆಯ ಮೇರೆಗೆ ದಾಸರ ಪದ, ಭಜನಗಳನ್ನು ಹಾಡಿ ಕೊನೆಯಲ್ಲಿ ಭೈರವಿಯೊಂದಿಗೆ 2 ದಿನದ ಉತ್ಸವ ಸಮಾಪ್ತಿಗೊಳಿಸಿದರು.

300x250 AD

ಇದಕ್ಕೂ ಪೂರ್ವದಲ್ಲಿ ಜನನಿ ಸಂಸ್ಥೆಯ ಪ್ರಾಚಾರ್ಯೆ ವಿದೂಷಿ ರೇಖಾ ದಿನೇಶ ತಮ್ಮ ಸಂಗೀತ ಕಚೇರಿ ನಡೆಸಿಕೊಡುತ್ತಾ ರಾಗ್ ಪೂರಿಯಾವನ್ನು ವಿಸ್ತಾರವಾಗಿ ಹಾಡಿದರು. ನಂತರ ನಮ್ಮಮ್ಮ ತುಳಸಿಮಾತೆ ಎಂಬ ಜನಪ್ರೀಯ ಭಕ್ತಿಗೀತೆ ಹಾಡಿದರು.
ಕೊನೆಯದಾದ ಮರಡೂರ ಗಾನಕ್ಕೆ ಹಾಗೂ ರೇಖಾರವರ ಗಾನದಲ್ಲಿ ವೈವಿಧ್ಯಮಯವಾಗಿ ತಬಲ ಬೋಲ್‌ಗಳನ್ನು ನುಡಿಸಿದವರು ಖ್ಯಾತ ತಬಲ ವಾದಕ ಡಾ| ಶ್ರೀಹರಿ ದಿಗ್ಗಾವಿ ಹಾಗೂ ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರರವರು, ಹಿನ್ನೆಲೆಯ ತಾನ್‌ಪುರಾದಲ್ಲಿ ಸ್ನೇಹಾ ಅಮ್ಮಿನಳ್ಳಿ, ಪೃಥ್ವಿ ಬೊಮ್ಮನಳ್ಳಿ, ಮಾನಸ ಹೆಗಡೆ ಹಾಗೂ ವಿಜಯಶ್ರೀ ಶಿರಸಿ, ತಾಳದಲ್ಲಿ ಕಿರಣ ಕಾನಗೋಡ ಸಾಥ್ ನೀಡಿದರು.
ಗಾಯಕರಿಬ್ಬರ ಗಾನ ಪೂರ್ವದ ಮೊದಲು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ರೇಖಾ ಸತೀಶ ಭಟ್ಟ ನಾಡಗುಳಿ, ಚೈತ್ರಾ ಹೆಗಡೆ, ಆಶಾ ಕೆರೆಗದ್ದೆ, ಮಹಿಮಾ ಗಾಯತ್ರಿ, ರೇಷ್ಮಾ ಶೇಟ್, ವಿಜಯಶ್ರೀ ಹೆಗಡೆಯವರು ಗ್ರೂಪ್ ಗಾಯನದಲ್ಲಿ ಪಾಲ್ಗೊಂಡು ಸೊಗಸಾಗಿ ಹಾಡಿದರು. ಈ ಸಂದರ್ಭದಲ್ಲಿ ತಬಲಾದಲ್ಲಿ ಕಿರಣ ಹೆಗಡೆ ಕಾನಗೋಡ ಹಾಗೂ ಸಂವಾದಿನಿಯಲ್ಲಿ ಸತೀಶ ಭಟ್ಟ ಸಹಕರಿಸಿದರು.
ಗಾನ ಮದ್ಯದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ಯಾವುದೇ ಭಾಷಣಗಳಿಲ್ಲದೇ, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂದಗೋಳದ ಸವಾಯಿ ಸಂಗರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಟ್ರಸ್ಟ್ನ ಟ್ರಸ್ಟಿಗಳಾದ ಜೀತೇಂದ್ರ ಕುಲಕರ್ಣಿ ಕಾಮದೊಳ್ಳಿರವರನ್ನು ಹಾಗೂ ಗಾಯಕ ಪಂಡಿತ ಕುಮಾರ ಮರಡೂರರನ್ನು ಗೌರವಿಸಲಾಯಿತು.
ಜನನಿ ಸಂಸ್ಥೆಯ ಅಧ್ಯಕ್ಷ ದಿನೇಶ ಹೆಗಡೆ ಸ್ವಾಗತಿಸಿದರೆ ಗಿರಿಧರ ಕಬ್ನಳ್ಳಿ ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top