ಯಲ್ಲಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆಸ್ಪತ್ರೆ ಯಲ್ಲಾಪುರ, ಗ್ರೀನ್‌ಕೇರ್ (ರಿ.) ಶಿರಸಿ, ಯುವ ರೆಡ್ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲ್ಲಾಪುರ, ಕ್ರಿಯೇಟಿವ್ ತರಬೇತಿ ಕೇಂದ್ರ, ಯಲ್ಲಾಪುರ, – ಐ.ಎಮ್.ಎ. ಲೈಫ್‌ಲೈನ್ ಬ್ಲಡ್ ಬ್ಯಾಂಕ್, ಪಂಡಿತ ಸಾರ್ವಜನಿಕ ಆಸ್ಪತ್ರೆ ಶಿರಸಿ, ಸಂಕಲ್ಪ ಟ್ರಸ್ಟ್ ಶಿರಸಿ ಮತ್ತು ರಕ್ತ ಶೇಖರಣಾ ಘಟಕ, ತಾಲೂಕು ಆಸ್ಪತ್ರೆ, ಯಲ್ಲಾಪುರ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮವನ್ನು ತಾಲೂಕು ಆಸ್ಪತ್ರೆ ಯಲ್ಲಾಪುರದ ಸಭಾಭವನದಲ್ಲಿ ಸೆ.26 ರಂದು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ದೀಪಕ್ ವಿ. ಭಟ್ಟ ದೀಪ ಬೆಳಗಿಸಿ ಉದ್ಘಾಟಿಸಿ ರಕ್ತದಾನದ ಮಹತ್ವದ ಬಗ್ಗೆ ಮತ್ತು ದಾನ ಮತ್ತು ತ್ಯಾಗದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿಗಳು ಹಾಗೂ ಗ್ರೀನ್ ಕೇರ್ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳು ಸದಾಶಿವ ಶಿವಯ್ಯನಮಠ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೊಲೀಸ್ ನಿರೀಕ್ಷಕರು ಯಲ್ಲಾಪುರ ಪೊಲೀಸ್ ಠಾಣೆಯ ರಮೇಶ್ ಹೆಚ್. ಹಾನಾಪುರ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಯಲ್ಲಾಪುರದ ಪ್ರಾಂಶುಪಾಲರಾದ ಡಾ. ಆರ್. ಡಿ. ಜನಾರ್ಧನ್ ರಕ್ತದಾನದ ಮಹತ್ವ ಮತ್ತು ಯುವಜನರಲ್ಲಿ ರಕ್ತದಾನದ ಜಾಗೃತಿ ಬಗ್ಗೆ ತಿಳಿಸಿದರು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಪ್ರಥಮಾ ಸಾನಿಧ್ಯ ಕಾಂಚನ್, ಡಾ. ಭರತ್, ಡಾ. ಶ್ರೀಕಾಂತ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಯಲ್ಲಾಪುರದ ಸಹಾಯಕ ಪ್ರಾಧ್ಯಾಪಕರಾದ ಶರತ್ ಕುಮಾರ್, ಕ್ರಿಯೇಟಿವ್ ತರಬೇತಿ ಸಂಸ್ಥೆ ಯಲ್ಲಾಪುರದ ಮುಖ್ಯಸ್ಥರಾದ ಶ್ರೀನಿವಾಸ್ ಎಂ ಮುರುಡೇಶ್ವರ್, ಸಂಕಲ್ಪ ಟ್ರಸ್ಟ್ ಶಿರಸಿಯ ಅಧ್ಯಕ್ಷರಾದ ಕುಮಾರ ಪಟಗಾರ, ಮತ್ತು ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಆಶಾ ಡಿಸೋಜಾ ಮತ್ತು ಗಜಾನನ ಭಟ್, ರಕ್ತ ಶೇಖರಣ ಘಟಕ ತಾಲೂಕ ಆಸ್ಪತ್ರೆ ಯಲ್ಲಾಪುರದ ಮಹಾಂತೇಶ್ ಉಪಸ್ಥಿತರಿದ್ದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರೀನ್ ಕೇರ್ ಸಂಸ್ಥೆಯ ಕೌಶಲ್ಯ ವಿಕಾಸ ತರಬೇತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಯಲ್ಲಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಭರತ್ ಸಿ. ಪಿ ಮತ್ತು ಡಾ. ಶ್ರೀಕಾಂತ್ ಚಾಲನೆ ಕೊಟ್ಟರು.