ಶಿರಸಿ: ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ: ಉತ್ತರ ಕನ್ನಡ, ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ (ರಿ.), ಬೆಂಗಳೂರು ಹಾಗೂ ಕರ್ನಾಟಕ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಶನ್, ಶಿರಸಿ ಘಟಕ ಇವರ ಸಹಯೋಗದಲ್ಲಿ ಸೆ.25ರಂದು “ವಿಶ್ವ ಫಾರ್ಮಸಿಸ್ಟ್ ದಿನಾಚರಣೆ-2024” ನ್ನು “ಫಾರ್ಮಸಿಸ್ಟ್ ಮೀಟಿಂಗ್ ಗ್ಲೋಬಲ್ ಹೆಲ್ತ್ ನೀಡ್ಸ್ ” ಎಂಬ ಘೋಷವಾಕ್ಯದೊಂದಿಗೆ ಪಂಚವಟಿ ಹೋಟೆಲ್ ನ ಚಿನ್ಮಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಕೆ. ವಿ. ನಾಗರಾಜ ಇವರು ನೆರವೇರಿಸಿ ಫಾರ್ಮಸಿಸ್ಟ್ ಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಪ್ರಭಾಕರ್ ವಿ. ಯವರು ವಿಶ್ವ ಫಾರ್ಮಸಿಸ್ಟ್ ದಿನಾಚರಣೆಯ ಹಿನ್ನೆಲೆ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ: ಉತ್ತರ ಕನ್ನಡದ ಅಧ್ಯಕ್ಷರಾದ ಮಹೇಶ ಡಿ. ನಾಯಕ್, ಅತಿಥಿಗಳಾಗಿ ಕರ್ನಾಟಕ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಶನ್, ಶಿರಸಿ ಘಟಕದ ಅಧ್ಯಕ್ಷರಾದ ಗಣೇಶ್ ಎಸ್. ಹೆಗಡೆ, ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ತೊನ್ಸೆ, ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಬೆಂಗಳೂರು ಇದರ ಉಪಾಧ್ಯಕ್ಷರಾದ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕಪಿಲಾ ಮೆಡಿಕಲ್ ಎಜೆನ್ಸಿಸ್ ನ ಮಾಲಕರಾದ ಚಂದ್ರಶೇಖರ್ ಹೆಗಡೆ, ಕೆಸಿಎಮ್ ಮತ್ತು ಎಸ್ ಆರ್ ಎ, ಶಿರಸಿ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ. ನಾಯ್ಕ್ ಉಪಸ್ಥಿತರಿದ್ದು ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ನಂತರ ಜಿಲ್ಲಾ ಮಟ್ಟದ 3 ಫಾರ್ಮಸಿ ಅಧಿಕಾರಿಗಳಿಗೆ “ಫಾರ್ಮಸಿ ರತ್ನ” ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕೆ ಸಿ ಡಿ ಎ ವತಿಯಿಂದ ತಾಲೂಕಾ ಮಟ್ಟದ “ಬೆಸ್ಟ್ ಕಮ್ಯೂನಿಟಿ ಫಾರ್ಮಸಿಸ್ಟ್ ” ಪ್ರಶಸ್ತಿ ಮತ್ತು “ಫಾರ್ಮಾ ಪೋಷಕ” ಪ್ರಶಸ್ತಿ ಪ್ರಧಾನ ಮಾಡಲಾಯಿತು. ನಂತರ ಡಾ. ಮಂಜುನಾಥ್ ಶೆಟ್ಟಿ, ಅಸಿಸ್ಟೆಂಟ್ ಪ್ರೊಫೆಸರ್, ಮೆಲಕಾ ಮೆಡಿಕಲ್ ಕಾಲೇಜು, ಮಣಿಪಾಲ ಇವರಿಂದ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನಂತರ ಮಧ್ಯಾಹ್ನದ ಅವಧಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ನೀರಜ್ ಬಿ.ವಿ.ಪಾಲ್ಗೊಂಡು ಫಾರ್ಮಸಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಡಾ. ನರೇಂದ್ರ ಕೆ ಪವಾರ್ ಫಾರ್ಮಸಿ ಅಧಿಕಾರಿಗಳೊಂದಿಗಿನ ತಮ್ಮ ಒಡನಾಟದ ಬಗ್ಗೆ ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಶನ್ ನ ಸದಸ್ಯರು, ಜಿಲ್ಲಾ ಔಷಧ ಉಗ್ರಾಣದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಸುಶ್ರುಶಾಧಿಕಾರಿ ಶ್ರೀಮತಿ ಚಂದ್ರಕಲಾ ನಾಯ್ಕ್ ಹಾಗೂ ಹಿರಿಯ ಫಾರ್ಮಸಿ ಅಧಿಕಾರಿ ಮಧುಕರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶರಣಪ್ಪ ಗೊಜನೂರು ಸ್ವಾಗತಿಸಿದರು. ವಿಜಯಕುಮಾರ್ ನಾಗನೂರು ವಂದನಾರ್ಪಣೆ ಮಾಡಿದರು.