Slide
Slide
Slide
previous arrow
next arrow

ಲಂಚ ಪಡೆದ ಪಟ್ಟಣ ಪಂಚಾಯತ್ ಸದಸ್ಯನಿಗೆ ಶಿಕ್ಷೆ ಪ್ರಕಟ

300x250 AD

ಕಾರವಾರ: ಮನೆಯ ಗೋಡೆಯನ್ನು ಕೆಡವದೇ ಗೋಡೆಯ ಹೊರಗಿನಿಂದ ಕಾಮಗಾರಿ ಮಾಡಲು ಲಂಚ ಪಡೆದಿದ್ದ ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ರವಿ ಸೋಮಯ್ಯ ದೇವಾಡಿಗ ಎಂಬಾತನಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7, ರಡಿ 1 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ ರೂ. 5000 ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 3 ತಿಂಗಳ ಕಾರಾಗೃಹವಾಸ ಶಿಕ್ಷೆ. ಕಲಂ 13(2) ರಡಿಯಲ್ಲಿ 2 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ ರೂ 5000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 3 ತಿಂಗಳ ಕಾರಾವಾಸ ಶಿಕ್ಷೆ ವಿಧಿಸಿ, ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.

ಪ್ರಕರಣ ಹಿನ್ನಲೆ: ಯಲ್ಲಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ್ ಸಂಖ್ಯೆ 5 ರಲ್ಲಿ ತಟಗಾರ ರಸ್ತೆ ಪಕ್ಕದದಲ್ಲಿರುವ ನರಸಿಂಹಯ್ಯ ವೆಂಕಟರಮಣ ಭಟ್ ರವರ ಮನೆಯ ಹಿಂಬದಿಯಿಂದ ಹಾದು ಹೋಗುವ ಹೊಸ ಬಡಾವಣೆ ರಸ್ತೆಗೆ ಪಟ್ಟಣ ಪಂಚಾಯತಿ ವತಿಯಿಂದ ಹೊಸದಾಗಿ ಚರಂಡಿ ನಿರ್ಮಿಸಲಾಗುತ್ತಿದ್ದು, ಈ ಚರಂಡಿ ನಿರ್ಮಿಸುವ ಕಾಮಗಾರಿಗೆ ಸದರಿಯವರು ನಿರ್ಮಿಸಿದ ಒತ್ತುವರಿ ಗೋಡೆಯನ್ನು ತೆಗೆದು ಕಾಮಗಾರಿ ಕೈಗೊಳ್ಳಬೇಕಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದು, ಯಲ್ಲಾಪುರ ಪಟ್ಟಣ ಪಂಚಾಯತನ ವಾಡ್ ನಂ. 5ರ ಸದಸ್ಯ ರವಿ ಸೋಮಯ್ಯ ದೇವಾಡಿಗ ಇವರು, ಮನೆಯ ಗೋಡೆಯನ್ನು ಕೆಡವದೇ ಹೊರಗಿನಿಂದ ತೆಗೆದುಕೊಂಡು ಕಾಮಗಾರಿಯನ್ನು ಮುಂದುವರೆಸಲು ಗುತ್ತಿಗೆದಾರನಿಗೆ ಹೇಳಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅಷ್ಟು ಹಣ ಕೊಡಲು ಸಾಧ್ಯವಿಲ್ಲವೆಂದು ಹೇಳಿದಾಗ ಆಪಾದಿತ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಮೊದಲ ಹಂತದಲ್ಲಿ ರೂ 500 ಪಡೆದು ಉಳಿದ ರೂ. 4500 ತಂದು ಕೊಡಲು ತಿಳಿಸಲಾಗಿ ರೂ 4500 ಲಂಚವನ್ನು ಸ್ವೀಕರಿಸುವಾಗ ಟ್ರ್ಯಾಪ್ ಕಾರ್ಯಾಚರಣೆ ಮೂಲಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆಪಾದಿತ ಪ.ಪಂ ಸದಸ್ಯನ ವಿರುದ್ದ ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ, ಉತ್ತರ ಕನ್ನಡದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆಸಲಾಗಿತ್ತು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮಿಕಾಂತ ಎಮ್ ಪ್ರಭು ವಾದ ಮಂಡಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top