ಶಿರಸಿ: ನಗರದ ಜನನಿ ಮ್ಯೂಸಿಕ್ ಸಂಸ್ಥೆಯಿಂದ ಸೆ.28,29 ಶನಿವಾರ, ಭಾನುವಾರದಂದು ಸಂಜೆ 5 ಘಂಟೆಯಿಂದ ಹೊಟೆಲ್ ಸುಪ್ರಿಯಾ ಇಂಟರನ್ಯಾಶನಲ್ ಸಭಾಭವನದಲ್ಲಿ ಹಿಂದೂಸ್ತಾನಿ ಸಂಗೀತದ ಖಯಾಲ್ ಉತ್ಸವ ನಡೆಯಲಿದೆ.
ಎರಡು ದಿನಗಳ ಕಾಲ ನಡೆಯುವ ಈ ಉತ್ಸವ ಸಂಪೂರ್ಣ ಉಚಿತವಾಗಿದ್ದು ಆರಂಭಿಕ ದಿನದ ಕಾರ್ಯಕ್ರಮವನ್ನು ಆರ್.ಎನ್.ಭಟ್ಟ ಸುಗಾವಿ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಲಿದ್ದು, ನಂತರ ನಡೆಯುವ ಗಾಯನದಲ್ಲಿ ಸಂಪದಾ, ಸ್ನೇಹಾ,ಮಾನಸಾ, ಪೃಥ್ವಿ ಬೊಮ್ನಳ್ಳಿ, ಸ್ನೇಹಾ ಹೆಗಡೆ, ರೇಖಾ ಭಟ್ಟ, ಶೈಲಾ, ಶರಧಿ, ಅರ್ಚನಾ, ಲತಾ ಸುಪರ್ಣಾ ತಮ್ಮ ಸಂಗೀತ ನಡೆಸಿಕೊಡಲಿದ್ದಾರೆ.
ಇದೇ ಸಂದರ್ಭದಲ್ಲಿ ತಬಲಾದಲ್ಲಿ ಕಿರಣ ಹೆಗಡೆ ಕಾನಗೋಡ, ರಾಮದಾಸ್ ಭಟ್ಟ ಸಹಕರಿಸಲಿದ್ದಾರೆ. ನಂತರ ನಡೆಯುವ ಆಮಂತ್ರಿತ ಕಲಾವಿದರ ಗಾಯನದಲ್ಲಿ ಧಾರವಾಡದ ಸದಾಶಿವ ಐಹೊಳೆ ಗಾಯನ ನಡೆಯಲಿದೆ. ತಬಲಾದಲ್ಲಿ ಗಣೇಶ ಗುಂಡ್ಕಲ್ ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ವರ್ಗಾಸರ ಸಹಕರಿಸಲಿದ್ದಾರೆ.
ಎರಡನೇ ದಿನ ಸೆ.29 ರವಿವಾರ ಕಾರ್ಯಕ್ರಮದಲ್ಲಿ ಆರಂಭಿಕ ಗಾಯನದಲ್ಲಿ ರೇಖಾ ಭಟ್ಟ ನಾಡಗುಳಿ, ವಿಜಯಶ್ರೀ ಹೆಗಡೆ, ಚೈತ್ರಾ ಹೆಗಡೆ, ಮಹಿಮಾ ಗಾಯತ್ರಿ, ಆಶಾ ಕೆರೆಗದ್ದೆ, ರೇಷ್ಮಾ ಶೇಟ್ ಗಾಯನ ಪ್ರಸ್ತುತ ಪಡಿಸಲಿದ್ದು, ತಬಲಾದಲ್ಲಿ ಕಿರಣ ಕಾನಗೋಡ ಸಹಕರಿಸಲಿದ್ದಾರೆ.
ನಂತರ ನಡೆಯುವ ಗಾಯನದಲ್ಲಿ ವಿ.ರೇಖಾ ದಿನೇಶ ತಮ್ಮ ಸಂಗೀತ ಕಛೇರಿ ನಡೆಸಿಕೊಡಲಿದ್ದು, ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್, ಸಾಥ್ ನೀಡಲಿದ್ದಾರೆ. ನಂತರ ಸಮಾರೋಪ ಸಮಾರಂಭ ನಡೆಯಲಿದ್ದು ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ನಿರ್ದೇಶಕ ಜಿತೇಂದ್ರ ಕುಲಕರ್ಣಿ, ಉದ್ಯಮಿ ದೀಪಕ ದೊಡ್ಡೂರ, ಹೊಟೆಲ್ ಸುಪ್ರಿಯಾ ಇಂಟರ್ ನ್ಯಾಷನಲ್‌ನ ಅಶ್ವಿನ್ ನಾಯ್ಕ ಪಾಲ್ಗೊಳ್ಳಲಿದ್ದಾರೆ.
ತದನಂತರ ನಡೆಯುವ ಆಮಂತ್ರಿತ ಕಲಾವಿದ ಕುಮಾರ ಮರಡೂರ ತಮ್ಮ ಗಾಯನ ನಡೆಸಿಕೊಡಲಿದ್ದು ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ ಸಂವಾದಿನಿಯಲ್ಲಿ ಹೆಗ್ಗಾರ್ ಸತೀಶ ಭಟ್ಟ ಸಾಥ ನೀಡಲಿದ್ದಾರೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜನನಿ ಸಂಸ್ಥೆಯ ಅಧ್ಯಕ್ಷ ದಿನೇಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.