Slide
Slide
Slide
previous arrow
next arrow

ಮತ್ತೆ ಬಿಜೆಪಿಗೆ ಶ್ರೀನಿವಾಸ ಧಾತ್ರಿ? ಸಂಸದ ಕಾಗೇರಿಗೆ ಬಲ!

300x250 AD

ಬಿಜೆಪಿ ಹಿರಿಯ ನಾಯಕರೊಟ್ಟಿಗೆ ಧಾತ್ರಿ ಮಾತುಕಥೆ | ಯಲ್ಲಾಪುರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಧಾತ್ರಿ

ಯಲ್ಲಾಪುರ: ಜಿಲ್ಲೆಯಲ್ಲಿಯೇ ಪ್ರತಿಬಾರಿ ತೀವ್ರ ಕುತೂಹಲ ಮೂಡಿಸುವ ಯಲ್ಲಾಪುರ – ಮುಂಡಗೋಡು ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ಇದೀಗ ಮತ್ತೆ ಹೊಸ ಚರ್ಚೆ ಮೂಡತೊಡಗಿದೆ. ಸದ್ಯ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಅತ್ತ ಬಿಜೆಪಿಯಲ್ಲಿಯೂ ಮಾನಸಿಕವಾಗಿ ಇಲ್ಲದೇ, ಕಾಂಗ್ರೆಸ್ ಗೆ ಅಧಿಕೃತವಾಗಿ ಹೋಗದೇ ಇರುವುದು ಕಾರ್ಯಕರ್ತರ ವಲಯದಲ್ಲಿ ಗೊಂದಲವನ್ನು ಉಂಟುಮಾಡಿದೆ.

ಏನೇ ಇದ್ದರೂ ಭಾಜಪಾ ಈ ಕ್ಷೇತ್ರಕ್ಕೆ ಹೊಸಮುಖ ಹುಡುಕುವುದು ಅನಿವಾರ್ಯವೇ ಆಗಿದೆ. ಮತ್ತು ಈಗಾಗಲೇ ಪಕ್ಷದ ವರಿಷ್ಠರು ಆ ದಿಶೆಯಲ್ಲಿ ಚಿಂತನೇ ಮಾಡಿರಬಹುದು. ಶಾಸಕ ಹೆಬ್ಬಾರ್ ಎದುರಿಗೆ ಬಿಜೆಪಿಯಲ್ಲಿದ್ದುಕೊಂಡು ಗುದ್ದಾಡುತ್ತಿದ್ದ ವಿ.ಎಸ್. ಪಾಟೀಲ್ ಕಾಂಗ್ರೆಸ್ ಗೆ ಹೋದ ಮೇಲೆ ಬಿಜೆಪಿ ತುಸು ಬಡವಾಗಿತ್ತು. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ, ಬಿಜೆಪಿಯಲ್ಲಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡಿದ್ದ ಯುವ ಸಂಘಟಕ, ಧುರೀಣ ಶ್ರೀನಿವಾಸ ಧಾತ್ರಿ ಸಹ ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆಗೆ ವಾಲಿದ್ದರು.

ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದ ಶ್ರೀನಿವಾಸ ಧಾತ್ರಿ :

ಕಳೆದ ಸಾಕಷ್ಟು ವರ್ಷಗಳಿಂದ ಯಲ್ಲಾಪುರ – ಮುಂಡಗೋಡು ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಗುರುತಿಸಿಕೊಂಡು, ಕಾರ್ಯಕರ್ತರನ್ನು ಹುರುದುಂಬಿಸಿಕೊಂಡು ಕೇಳಿದವರಿಗೆ ಇಲ್ಲ ಎನ್ನದ ಕೊಡುಗೈ ದಾನಿಯಾಗಿದ್ದ ಧಾತ್ರಿ, ಕ್ಷೇತ್ರದಲ್ಲಿ ಬಿಜೆಪಿಯ ಮುಂದಿನ ಅಭ್ಯರ್ಥಿಗೆ ಸೂಕ್ತ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಒಳ ರಾಜಕೀಯದ ಕಾರಣಕ್ಕೆ ಕಾಂಗ್ರೆಸ್ ಸೇರುವ ಮೂಲಕ ಅಭಿಮಾನಿಗಳ, ಕಾರ್ಯಕರ್ತರುಗಳಲ್ಲಿ ನಿರಾಸೆ ಮೂಡಿಸಿದ್ದರು. ಧಾತ್ರಿ ಅವರು ಕಾಂಗ್ರೆಸ್ ಸೇರುವ ಮನಸಿಗರು ಎಂದಿಗೂ ಅಲ್ಲಾ, ಅವರು ವಾಪಾಸ್ ಬಂದೇ ಬರುತ್ತಾರೆ ಎಂಬ ದೃಢ ವಿಶ್ವಾಸ ಅಂದೇ ಅವರ ಸುತ್ತಲಿನ ಕಾರ್ಯಕರ್ತರದ್ದಾಗಿತ್ತು. ಅವರ ಆ ವಿಶ್ವಾಸ ಇದೀಗ ಮತ್ತೆ ನಿಜವಾಗುವಂತೆ ಕಾಣುತ್ತದೆ. ಕ್ಷೇತ್ರದಲ್ಲಿ ಮತ್ತೆ ಪಕ್ಷಾಂತರದ ಗಾಳಿ ಬೀಸುವಂತೆ ತೋರುತ್ತಿದೆ.

300x250 AD

ಬಿಜೆಪಿ ನಾಯಕ ಸಂಸದ ಕಾಗೇರಿ ಜೊತೆ ಧಾತ್ರಿ ಮಾತುಕಥೆ:

ಶಾಸಕ ಹೆಬ್ಬಾರ್ ಅವರನ್ನು ವಿರೋಧಿಸಿ, ಯಲ್ಲಾಪುರ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಪ್ರಯತ್ನ ಮಾಡುತ್ತಿರುವ ಸಂಸದ ಕಾಗೇರಿ ಮತ್ತು ಶ್ರೀನಿವಾಸ ಧಾತ್ರಿ ನಡುವೆ ಒಂದು ಸುತ್ತಿನ ಮಾತುಕಥೆ ನಡೆದಿದೆ ಎನ್ನಲಾಗಿದ್ದು, ಕಾಗೇರಿಯವರೂ ಸಹ ಧಾತ್ರಿಯವರನ್ನು ಬಿಜೆಪಿಗೆ ಮತ್ತೆ ತರಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಶ್ರೀನಿವಾಸ ಧಾತ್ರಿ ಬಿಜೆಪಿಗೆ ಬಂದರೆ ಕಾರ್ಯಕರ್ತರಿಗೂ ಬಲ ತುಂಬಿದಂತಾಗುತ್ತದೆ ಜೊತೆಗೆ ಹೆಬ್ಬಾರ್ ರಿಗೂ ಸವಾಲೆಸೆಯಬಹುದು ಎಂಬ ಲೆಕ್ಕಾಚಾರ ಇರಬಹುದು.

ಬಿಜೆಪಿಗೆ ಧಾತ್ರಿ ಬರಲು ಸಂಘ ಪರಿವಾರದ ಒಪ್ಪಿಗೆ : ಈ ಹಿಂದೆ ಒಳ ರಾಜಕೀಯ ಕಾರಣಕ್ಕೆ ಪಕ್ಷ ತೊರೆದಿದ್ದ ಶ್ರೀನಿವಾಸ ಧಾತ್ರಿ ಬಿಜೆಪಿಗೆ ಸೇರಲು ಸಂಘಟನೆಗಳ ಹಿರಿಯರು, ಸಂಘ ಪರಿವಾರದ ಪೂರ್ಣ ಒಪ್ಪಿಗೆಯಿದೆ. ಸಂಘ ಪರಿವಾರದ ಜೊತೆಗೆ ಶ್ರೀನಿವಾಸ ಧಾತ್ರಿ ಎಂದಿಗೂ ಚೆನ್ನಾಗಿಯೇ ಇದ್ದರು. ಮತ್ತು ಧಾತ್ರಿ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರಾಗಿರುವ ಕಾರಣಕ್ಕೆ ಸಂಘ ಪರಿವಾರದ ಅಡೆ ಆಗಲಾರದು ಎಂಬ ಮಾಹಿತಿ ತಿಳಿದುಬಂದಿದೆ.

ಕಾಂಗ್ರೆಸ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗು ದೇಶಪಾಂಡೆ ಎರಡೂ ಬಣಕ್ಕೆ ಬೇಕಾದವರಾಗಿ ಗುರುತಿಸಿಕೊಂಡಿದ್ದ ಶ್ರೀನಿವಾಸ ಧಾತ್ರಿ, ಈಗಲೇ ಬಿಜೆಪಿಗೆ ಬರುತ್ತಾರೋ ಅಥವಾ ಕಾಂಗ್ರೆಸಿನಲ್ಲಿಯೇ ಮುಂದುವರೆದು ಮುಂದಿನ ರಾಜಕೀಯ ವಿದ್ಯಮಾನ ನೋಡಿ ನಿರ್ಧಾರ ಮಾಡುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.

Share This
300x250 AD
300x250 AD
300x250 AD
Back to top