ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ದೀಪದಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸನ್ಮಾನಿತ ಮತ್ತು ಮುಖ್ಯ ಅತಿಥಿಗಳಾದ ಮಿರ್ಜಾನಿನ ಜನತಾ ವಿದ್ಯಾಲಯದ ಮುಖ್ಯ ಶಿಕ್ಷಕರಾದ ವಿಷ್ಣುಮೂರ್ತಿ ಪಿ. ಶ್ಯಾನಭಾಗ ಶಿಕ್ಷಕನಾದವನು ಜ್ಞಾನದ ಪ್ರಸಾರವನ್ನು ಮಾಡಬೇಕು. ವೃತ್ತಿ ಜೀವನದಲ್ಲಿ ವೃತ್ತಿಯನ್ನು, ವಿದ್ಯಾರ್ಥಿಗಳನ್ನು, ವಿಷಯವನ್ನು ಮತ್ತು ದೇಶವನ್ನು ಪ್ರೀತಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷರಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಪ್ರೀತಿ ಪಿ. ಭಂಡಾರಕರ ಮಾತನಾಡಿ ಶಿಕ್ಷಕರು ಭವಿಷ್ಯದಲ್ಲಿ ಸುಸ್ಥಿರ ಭಾರತವನ್ನು ನಿರ್ಮಿಸುವಲ್ಲಿ ತಮ್ಮ ಕೊಡುಗೆಗಳನ್ನು ನೀಡಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದತ್ತಿನಿಧಿ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಯಾದಿಯನ್ನು ಉಪನ್ಯಾಸಕ ಸುಬ್ರಹ್ಮಣ್ಯ ಕೆ. ಭಟ್ ವಾಚಿಸಿದರು. ಶಿಕ್ಷಕ ವಿದ್ಯಾರ್ಥಿಗಳಾದ ಕನಕಪ್ಪ, ಸುಮಾ ನಾಯ್ಕ, ರಾಜು ಆಲದಗಿಡ, ತೇಜಾ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾದ ಶ್ರೀ ವಿಷ್ಣುಮೂರ್ತಿ ಪಿ. ಶ್ಯಾನಭಾಗರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕು. ಅಂಜನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕ ಉಮೇಶ ನಾಯ್ಕ ಎಸ್. ಜೆ ಸ್ವಾಗತಿಸಿದರು. ಮುಖ್ಯ ಅತಿಥಿಗಳನ್ನು ಸಭೆಗೆ ಅತಿಥಿ ಉಪನ್ಯಾಸಕರಾದ ಸಿ.ಎಸ್.ನಾಯ್ಕ ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷರಾದ ಜಿ.ಡಿ.ಭಟ್ ವಂದಿಸಿದರು. ವಿ. ಅನ್ವಿತಾ ಮತ್ತು ಮಾನಸಾ ಭಟ್ ಕಾರ್ಯಕ್ರಮ ನಿರೂಪಿಸಿದರು.