ಶಿರಸಿ: ನಗರದ ಎಂಎಂ ಮಹಾವಿದ್ಯಾಲಯದ ವಿದ್ಯಾರ್ಥಿ ಕು. ಭರತ್ ಕೊಠಾರಿ ಸಂಗೀತ ವಿಷಯದಲ್ಲಿ ಬಿಎ ಅಂತಿಮ ವರ್ಷದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನೀಡುವ ಪದ್ಮಭೂಷಣ ಡಾ. ಬಸವರಾಜ್ ರಾಜಗುರು ಸ್ವರ್ಣ ಪದಕ ಪಡೆದಿದ್ದಾನೆ. ಇವನ ಈ ಸಾಧನೆಗೆ ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್, ಪದಾಧಿಕಾರಿಗಳು, ಪ್ರಾಚಾರ್ಯ ಪ್ರೊಫೆಸರ್ ಜಿ.ಟಿ.ಭಟ್ ಸಂಗೀತ ಮತ್ತು ನೃತ್ಯ ವಿಭಾಗದ ಪ್ರಾಧ್ಯಾಪಕರು, ಶಿಕ್ಷಕ,ಶಿಕ್ಷಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಸ್ವರ್ಣ ಗೆದ್ದ ಭರತ್
