Slide
Slide
Slide
previous arrow
next arrow

ತಾಲೂಕ ಮಟ್ಟದ ಕ್ರೀಡೆಯಲ್ಲಿ ಲಯನ್ಸ್ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: 14 ವರ್ಷ ವಯೋಮಿತಿ ಒಳಗಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಕ್ರೀಡಾಕೂಟ ಶಿರಸಿಯ ಚಂದನ ಹಿರಿಯ ಪ್ರಾಥಮಿಕ ಶಾಲೆ ನರೇಬೈಲ್ ನೇತೃತ್ವದಲ್ಲಿ ಇತ್ತೀಚೆಗೆ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ್ದು ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ.

ವೇದಾಂತ ಹೆಗಡೆ ಎತ್ತರ ಜಿಗಿತ ದ್ವಿತೀಯ, ಸಿಂಚನ ಹೆಗಡೆ ಯೋಗಾಸನ ಪ್ರಥಮ, ಅನ್ವಿತಾ ಹೆಗಡೆ ಚೆಸ್ ಪ್ರಥಮ, ಅಭಯ್ ಹೆಗಡೆ ಚೆಸ್ ಪ್ರಥಮ, ಬಾಲಕರ ವಿಭಾಗದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಅರ್ಜುನ್ ಹೆಗಡೆ, ಸ್ವರೂಪ್ ಶಾನಭಾಗ್, ಕಲ್ಯಾಣ್ ಭಟ್, ಗುರುದತ್ ಶೇಟ್, ಆರುಷ ರಾಯ್ಕರ್ ಪ್ರಥಮ, ಟೇಬಲ್ ಟೆನ್ನಿಸ್‌ನಲ್ಲಿ ಅರ್ಜುನ್ ಹೆಗಡೆ ,ಅಮೇಯ ವೈ, ಹರ್ಷ ಪಟಗಾರ, ಲೋಹಿತ್ ಅಗೇರ್ , ಶಿವಪ್ರಸಾದ್ ಭಟ್ ಪ್ರಥಮ, ಬಾಲಕಿಯರ ಟೇಬಲ್ ಟೆನಿಸ್‌ನಲ್ಲಿ ಅನ್ಸಿಕಾ ಹೆಗಡೆ, ಧರಣಿ ನಾಯ್ಕ, ಸಾನ್ವಿ ಅಚಲಕರ್ ,ಸಿಂಚನ ಹೆಗಡೆ, ಪಲ್ಲವಿ ಜೋಶಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚಿನ್ಮಯ್ ಪೂಜಾರಿ ಗುಂಡು ಎಸೆತ ತೃತೀಯ, ಲೌಖ್ಯ ಹೆಗಡೆ ಎತ್ತರ ಜಿಗಿತ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರೌಢಶಾಲಾ ವಿಭಾಗದಲ್ಲಿ ಕುಮಾರಿ ತನುಶ್ರೀ.ಟಿ ತ್ರಿವಿಧ ಜಿಗಿತದಲ್ಲಿ ದ್ವಿತೀಯ, ಶಟಲ್ ಬ್ಯಾಡ್ಮಿಂಟನ್ ಲ್ಲಿ ಕುಮಾರಿ ತ್ವಿಷಾ ಹೆಗಡೆ ,ಗೌತಮಿ ಕೆ , ನಿಶಾ ಪ್ರಸನ್ , ಸಮೀಕ್ಷಾ ರಾಯ್ಕರ್, ಶ್ರಾವ್ಯ ಎಸ್.ಕೆ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಕರಾದ ಶ್ರೀಮತಿ ಚೇತನಾ ಪಾವಸ್ಕರ್ ಹಾಗೂ ನಾಗರಾಜ್ ಜೋಗಳೇಕರ್ ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶೈಕ್ಷಣಿಕ ಮುಖ್ಯಸ್ಥರು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು,ಪಾಲಕರು ಹರ್ಷ ವ್ಯಕ್ತಪಡಿಸಿರುತ್ತಾರೆ. ಮುಂದಿನ ಹಂತಕ್ಕೆ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top