ಶಿರಸಿ: ಈ ವರ್ಷದ ಬಡಗುತಿಟ್ಟು ಯಕ್ಷಗಾನ ಯುಎಇ ಯ ತಿರುಗಾಟ ಕಾರ್ಯಕ್ರಮಗಳು ಯಕ್ಷ ಯಾಮಿನಿ ಅಡಿಯಲ್ಲಿ ಸೆ.21ಕ್ಕೆ ದುಬೈಯಲ್ಲಿ ಮತ್ತು ಸೆ. 22 ಕ್ಕೆ ಅಬುಧಾಬಿಯಲ್ಲಿ ರಂಗೇರಲಿದೆ.
21 ರಂದು ಸಂಜೆ 5 ಗಂಟೆಯಿಂದ ದುಬೈಯ ಜೆಮ್ಸ್ ನ್ಯೂ ಮಿಲೇನಿಯಂ ಶಾಲೆ, ಅಲ್ ಖೈಲ್ ಗೇಟ್ ನಲ್ಲಿ ವೀರ ಬರ್ಬರಿಕ ಎಂಬ ಪ್ರಸಂಗವನ್ನು, 22 ರಂದು ಸಂಜೆ 3 ಗಂಟೆಯಿಂದ ಅಬುಧಾಬಿಯ ಜೆಮ್ಸ್ ವರ್ಲ್ಡ್ ಅಕಾಡೆಮಿಯಲ್ಲಿ ಭೀಷ್ಮ ವಿಜಯ ಎಂಬ ಪ್ರಸಂಗವನ್ನು ತಾಯ್ನಾಡಿನ ಪ್ರಬುದ್ಧ ಯಕ್ಷಗಾನ ಕಲಾವಿದರು, ಸ್ಥಳೀಯ ಕಲಾವಿದರು ಆಡಿತೋರಿಸಲಿದ್ದಾರೆ.
ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆಯಲ್ಲಿ ಸುನೀಲ ಭಂಡಾರಿ, ಚಂಡೆಯಲ್ಲಿ ಸುಜನ್ ಹಾಲಾಡಿ ಸಾಥ್ ನೀಡಲಿದ್ದಾರೆ. ಮುಮ್ಮೇಳದಲ್ಲಿ ಪ್ರಸನ್ನ ಶೆಟ್ಟಿಗಾರ್, ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉದ್ದೂರ್, ರವೀಂದ್ರ ದೇವಾಡಿಗ, ವಿನಯ ಬೇರೊಳ್ಳಿ, ಸಂತೋಷ್ ಕುಲಾಲ್ ಹಾಗೂ ಸ್ಥಳೀಯ ಕಲಾವಿದರು ಭಾಗವಹಿಸಲಿದ್ದಾರೆ.
ಎರಡೂ ಯಕ್ಷಗಾನ ಕಾರ್ಯಕ್ರಮಗಳು ಉಚಿತ ಪ್ರವೇಶ ಹಾಗೂ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ ಎಂದು ವಿನಾಯಕ ಹೆಗಡೆ, ಪ್ರಶಾಂತ್ ಭಟ್ ಮತ್ತು ಗಣಪತಿ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.