Slide
Slide
Slide
previous arrow
next arrow

ಪೋಷಣಾ ಮಾಸಾಚರಣೆ ಕಾರ್ಯಕ್ರಮ

300x250 AD

ಶಿರಸಿ : ಪಟ್ಟಣದ ಬನವಾಸಿ ರಸ್ತೆಯ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಮಾಸಾಚರಣೆಯ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.‌

ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಆಚರಿಸುವ ಪೋಷಣಾ ಅಭಿಯಾನದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕುಳವೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ, ಸದಸ್ಯ ಸಂದೇಶ ಭಟ್ ಬೆಳಖಂಡ ಭಾಗವಹಿಸಿದ್ದರು. ಇದೇ ವೇಳೆ ಪ್ರಸವ ಪೂರ್ವ ಆರೈಕೆ, ರಕ್ತಹೀನತೆ, ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆ, ಬಾಲಕಿಯರ ಶಿಕ್ಷಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿಯನ್ನು ಇಲಾಖೆಯಿಂದ ಒದಗಿಸಲಾಯಿತು.

300x250 AD

ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಶಿಕ್ಷಕರು ಆರೋಗ್ಯಕರ ಮತ್ತು ಪೌಷ್ಠಿಕ ಅಡಿಗೆಗಳನ್ನು ತಯಾರಿಸಿ, ಗರ್ಭಿಣಿ, ಬಾಣಂತಿ, ಮಕ್ಕಳು ಹಾಗೂ ಕಿಶೋರಿಯರಿಗೆ ಪೌಷ್ಟಿಕಾಂಶ ಸುಧಾರಣೆ ಒತ್ತು ನೀಡಲಾಯಿತು. ಈ ವೇಳೆ ಇಲಾಖೆಯ ಗಿರಿಜಾ ಮುಟಗುಪ್ಪಿ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ನಿಗರ್ ಬಾನು ಇದ್ದರು.

Share This
300x250 AD
300x250 AD
300x250 AD
Back to top