ಹೊನ್ನಾವರ : ಪಟ್ಟಣದ ಗೇರುಸೊಪ್ಪ ಸರ್ಕಲ್ನಿಂದ ಶರಾವತಿ ಸರ್ಕಲ್ ವರೆಗಿನ ರಸ್ತೆ ಅಂಚಿನ ಅಂಗಡಿಗಳಿಗೆ ಪಟ್ಟಣ ಪಂಚಾಯತದವರಿಂದ ಸೆ.17 ರಿಂದ ಅ.2ರವರೆಗೆ 17 ದಿನಗಳ ಕಾಲ ನಡೆಯುವ ಸ್ವಚ್ಛತೆಯೇ ಸೇವೆ-2024ರ ಅಂಗವಾಗಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಹೆದ್ದಾರಿ ಅಂಚಿನ ಗೂಡಂಗಡಿ ಮತ್ತು ಇತರೆ ಅಂಗಡಿಗಳಿಗೆ ತೆರಳಿ ಸ್ವಚ್ಛತೆ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಪ್ಲಾಸ್ಟಿಕ್ ವಶಪಡಿಸಿಕೊಂಡು, ಒಟ್ಟು ಏಳು ಸಾವಿರ ರೂ. ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ನಾಗರಾಜ ಭಟ್ಟ, ಉಪಾಧ್ಯಕ್ಷ ಸುರೇಶ್ ಹೊನ್ನಾವರ, ಸದಸ್ಯರಾದ ಮೇಧಾ ನಾಯ್ಕ, ಸುಭಾಸ ಹರಿಜನ, ಮುಖ್ಯಾಧಿಕಾರಿ ಯೇಶು ಬೆಂಗಳೂರು, ಸಿಬ್ಬಂದಿಗಳು ಇದ್ದರು.