ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಟಿಎಸ್ಎಸ್ ಕಾನೂನು ಹೋರಾಟದಲ್ಲಿ ಧಾರವಾಡದ ಉಚ್ಛ ನ್ಯಾಯಾಲಯ ಟಿಎಸ್ಎಸ್ ಹಾಲಿ ಆಡಳಿತ ಮಂಡಳಿ ಪರವಾಗಿ ಮಧ್ಯಂತರ ಆದೇಶ ಹೊರಡಿಸಿದೆ. ಆಮೂಲಕ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರಿಗೆ ತುಸು ಮುನ್ನಡೆಯಾಗಿದ್ದು, ಸೆ.24 ರಂದು ಆಯೋಜನೆಗೊಂಡಿದ್ದ ವಾರ್ಷಿಕ ಸರ್ವ ಸಾಮಾನ್ಯ ಸಭೆ ನಡೆಸಲು ಇದ್ದ ತೊಡಕು ನಿವಾರಣೆಯಾದಂತಿದೆ.
ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠದಲ್ಲಿ ಬುಧವಾರ ಹೊರಡಿಸಿದ ಮಧ್ಯಂತರ ಆದೇಶದ ಪ್ರಕಾರ, ಹಾಲಿ ಆಡಳಿತ ಮಂಡಳಿಗೆ ಅಧಿಕಾರ ದೊರೆತಿದೆ.
ಕೆಎಟಿಯಲ್ಲಿದೆ ರಿ ಇಲೆಕ್ಷನ್ ಪ್ರಕರಣ:
ಕಾರವಾರದ ಡಿಅರ್ ಕೋರ್ಟ್ ಚುನಾವಣೆ ಕಾನೂನುಬದ್ಧವಾಗಿ ನಡೆದಿಲ್ಲ. ಹಾಗಾಗಿ ಪುನಃ ಚುನಾವಣೆ ನಡೆಸಬೇಕು ಎಂದು ಆದೇಶಿಸಿ, ವಿಶೇಷ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿತ್ತು. ವಿಶೇಷ ಅಧಿಕಾರಿ ನೇಮಕ ಪ್ರಶ್ನಿಸಿ ಬೆಳಗಾವಿ ಜೆಅರ್ ಕೋರ್ಟಿನಲ್ಲಿ ಹಾಲಿ ಆಡಳಿತ ಮಂಡಳಿ ಅಧಿಕಾರದ ಪರವಾಗಿ ಆದೇಶ ಬಂದಿತ್ತು. ಇದನ್ನು ಪ್ರಶ್ನಿಸಿ ಕೆಲ ಶೇರು ಸದಸ್ಯರು ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠ ಇದಕ್ಕೆ ಮಧ್ಯಂತರ ಆದೇಶ ನೀಡಿತ್ತು. ಇನ್ನು ರಿ ಎಲೆಕ್ಷನ್ ಸಂಬಂಧಿಸಿ ಪ್ರಕರಣ ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ (ಕೆಎಟಿ) ಅಲ್ಲಿ ವಿಚಾರಣೆ ನಡೆಯುತ್ತಿದ್ದು, ಅದು ಕೆಲ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮತ್ತು ವಿಶೇಷಾಧಿಕಾರಿ ನೇಮಕ ವಿಚಾರಕ್ಕೆ ಏಕಸದಸ್ಯ ಪೀಠದಲ್ಲಿ ವಿಚಾರಣೆ ಇನ್ನು ಮುಂದೆ ನಡೆಯಲಿದೆ ಎಂಬ ಮಾಹಿತಿ ಇದೆ.